ರಾಮನಗರ: ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಕೋಡೋಣ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಹಾಲಿನ ದರ ಏರಿಕೆಯ ಮುನ್ಸೂಚನೆ ನೀಡಿದ್ದಾರೆ. ಮಾಗಡಿಯಲ್ಲಿ ಮಾತನಾಡಿದ ಅವರು,
ಮಾಗಡಿ ಶಾಸಕ ಬಾಲಕೃಷ್ಣ ಏನೇನು ಕೇಳ್ತಾರೋ ಎಲ್ಲವನ್ನೂ ಮಾಡಿಕೊಡುತ್ತೇವೆ. ನಾನು ಇರೋದೇ ಬಡವರ ಪರವಾಗಿ. ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಕೊಡೋಣ ಎಂದು ಹೇಳಿದರು. ಎಷ್ಟು ಹಾಲಿನ ದರ ಹೆಚ್ಚಳ ಮಾಡುತ್ತೇವೆಯೋ ಎಲ್ಲವನ್ನೂ ರೈತರಿಗೆ ಕೊಡೋಣ ಎಂದು ಸಚಿವ ರಾಜಣ್ಣ ಅವರನ್ನ ಉದ್ದೇಶಿಸಿ ಹೇಳಿದರು.
ಹಾಲಿಗೆ 5 ರೂಪಾಯಿ ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದು ಯಾರು? ಕುಮಾರಸ್ವಾಮಿನಾ, ಬೊಮ್ಮಾಯಿನಾ. ಪ್ರೋತ್ಸಾಹ ಹಣ ಹೆಚ್ಚಳ ಮಾಡಿದ್ದು ನಾನು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕ್ಷೀರ ಭಾಗ್ಯ ಕಾರ್ಯಕ್ರಮ ಘೋಷಣೆ ಮಾಡಿ ಸರ್ಕಾರಿ ಶಾಲೆ ಮಕ್ಕಳಿಗೆ ಹಾಲು ಕೊಡಿ ಎಂದಿದ್ದು ನಾನು. ಹಿಂದಿನ ಸರ್ಕಾರ ಈ ಕೆಲಸ ಮಾಡಿತ್ತಾ. ಮಣ್ಣಿನ ಮಕ್ಕಳು, ರೈತರ ಮಕ್ಕಳು ಎಂದು ಹೇಳಿಕೊಂಡು ತಿರುಗುವವರು ಆ ಕೆಲಸ ಮಾಡಿದ್ದರಾ ಎಂದು ಕಿಡಿಕಾರಿದರು.