Friday, November 15, 2024

ಬಿಸಿಸಿಐ ಕಾರ್ಯದರ್ಶಿ ಜಯ ಶಾಗೆ ಐಸಿಸಿ ಅಧ್ಯಕ್ಷ ಪಟ್ಟ?

ನವದೆಹಲಿ: ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ)​​ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಪುತ್ರ ಜಯ ಶಾ ಅವರು ಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಬಗ್ಗೆ ಸುದ್ದಿ ಕ್ರಿಕೆಟ್​ ಜಗತ್ತಿನಲ್ಲಿ ಹರಿದಾಡುತ್ತಿದೆ.

ಸದ್ಯ ನವೆಂಬರ್​ ತಿಂಗಳನಲ್ಲಿ ಐಸಿಸಿ ಅಧ್ಯಕ್ಷ ಗ್ರೇಗ್​ ಬರ್ಕಲಿ ಅವಧಿ ಅಂತ್ಯವಾಗಲಿದೆ. ಈ ಸ್ಥಾನಕ್ಕೆ ಭಾರತದಿಂದ ಜಯ ಶಾ ಹೆಸರು ಕೇಳಿಬರುತ್ತಿರುತ್ತಿದೆ. ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಯ ಶಾ ಸ್ಪರ್ಧೆ ಮಾಡಿದರೆ ಆಸ್ಟ್ರೇಲಿಯಾ, ಇಂಗ್ಲೆಂಡ್​​ನಂತಹ ಪ್ರಬಲ ದೇಶಗಳ ಸಪೋರ್ಟ್​ ಸಿಗುವುದರಿಂದ ಅಧ್ಯಕ್ಷನಾಗುವುದು ಪಕ್ಕಾ ಅಂತ ಕ್ರಿಕೆಟ್​ ಲೋಕದಲ್ಲಿ ಚರ್ಚೆ ಶುರುವಾಗಿದೆ.

ಇನ್ನು ಐಸಿಸಿಯಲ್ಲಿ 16 ರಾಷ್ಟ್ರಗಳು ವೋಟಿಂಗ್ ಅಧಿಕಾರ ಹೊಂದಿವೆ. ಈ ರಾಷ್ಟ್ರಗಳ ಪೈಕಿ ಬಹುತೇಕ ರಾಷ್ಟ್ರಗಳಿಂದ ಜಯ ಶಾ ಅವರಿಗೆ ಬೆಂಬಲ ಸಿಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಅಮಿತ್ ಶಾ ಪುತ್ರ ಜಯ ಶಾ ಅವರಿಗೆ ಐಸಿಸಿ ಅಧ್ಯಕ್ಷ ಸ್ಥಾನ ಲಭಿಸಬಹುದು. ಕೇವಲ 35ನೇ ವಯಸ್ಸಿಗೆ ಜಯ ಶಾ ಅವರಿಗೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ದೊರೆಯಲಿದೆ.

RELATED ARTICLES

Related Articles

TRENDING ARTICLES