Friday, September 20, 2024

ಪೂಜೆಗೆ ಕರೆದೊಯ್ದು ರೀಲ್ಸ್​ ಚಿಟ್ಟೆಯನ್ನು ಕೊಂದ ಪತಿ

ಬೆಂಗಳೂರು: ರೀಲ್ಸ್​ ಗೀಳಿಗೆ ಬಿದ್ದವರು ನೋಡಲೇಬೇಕಾದ ಸ್ಟೋರಿ ಇದು, ರೀಲ್ಸ್​ ಮಾಡುತ್ತಿದ್ದ ಹೆಂಡತಿಯನ್ನು ಪತಿಯೇ ಹತ್ಯೆ ಮಾಡಿರುವ ಘಟನೆ ಮಾಗಡಿ ತಾಲೂಕಿನ ಹೂಜಗಲ್ಲು ಬೆಟ್ಟದಲ್ಲಿ ನಿನ್ನೆ ನಡೆದಿದೆ.

ಇದನ್ನೂ ಓದಿ: ಎಸಿಪಿ ಚಂದನ್‌ಗೆ ಆವಾಜ್ ಹಾಕಿದ್ದ ನಟ ದರ್ಶನ್!

ದಿವ್ಯಾ ಹತ್ಯೆಯಾದ ಮಹಿಳೆ, ಮೂಲತಃ ಮಾಗಡಿ ತಾಲ್ಲೂಕಿನ ಕುರುಪಾಳ್ಯ ಗ್ರಾಮದ ನಿವಾಸಿಗಳಾದ ಉಮೇಶ್ ಮತ್ತು ದಿವ್ಯಾ ವಿಚ್ಛೇದನ ಪಡೆಯಲು ಮುಂದಾಗಿದ್ದರು. ಈ ಹಿನ್ನೆಲೆ ಇಬ್ನರು ನೆನ್ನೆ ಮಾಗಡಿ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಪತ್ನಿಯ ಮನವೊಲಿಸಿ ಪೂಜೆ ನೆಪವೊಡ್ಡಿ ಪತಿ ಉಮೇಶ್ ಹೂಜುಗಲ್ಲು ಬೆಟ್ಟಕ್ಕೆ ಕರೆ ತಂದಿದ್ದ. ಪೂಜೆಮಾಡುವ ವೇಳೆಯೇ ಪತ್ನಿಯನ್ನು ಹತ್ಯೆ ಮಾಡಿ ಚೀಲೂರು ಅರಣ್ಯ ಪ್ರದೇಶದಲ್ಲಿ ಶವ ಎಸೆದು ಎಸ್ಕೇಪ್ ಆಗಿದ್ದಾನೆ.

ಈ ಸಂಬಂಧ ಐವರ ಮೇಲೆ ಮಾಗಡಿ ಪೋಲಿಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು. ಉಮೇಶ್ ಸೇರಿದಂತೆ ಮೂವರು ಆರೋಪಿಗಳನ್ನು ಪೋಲಿಸರು ವಶಪಡಿಸಿಕೊಂಡು ಮತ್ತೋರ್ವನಿಗಾಗಿ ತಲಾಶ್ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES