ದೆಹಲಿ: ಪಂಚ ಗ್ಯಾರಂಟಿಗಳಲ್ಲಿ ಪರಿಷ್ಕರಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಸಚಿವ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಪವರ್ ಟಿವಿ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಈ ಯೋಜನೆ ತಲುಪ್ಪುತ್ತದೆ. ಪಂಚ ಗ್ಯಾರಂಟಿಗಳನ್ನು ನಾವು ನಡೆಸುತ್ತೇವೆ ಅಂತಾ ಹೇಳಿ ಜಾರಿಗೆ ತಂದಿದ್ದೇವೆ, ಪರಿಷ್ಕರಣೆ ಮಾಡಿದರೇ ಆರ್ಥಿಕ ಹೊರೆಯಲ್ಲಿ ಸ್ವಲ್ಪ ತಗ್ಗಿಸಬಹುದು, ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯದಲ್ಲಿ ಪರಿಷ್ಕರಣೆ ಮಾಡಲು ಅವಕಾಶವಿದೆ, ಸಿಎಂ ಬಳಿ ಅನ್ನಭಾಗ್ಯ ವಿಚಾರದಲ್ಲಿ ಚರ್ಚೆ ಮಾಡ್ತೇನೆ, APL ಮತ್ತು BPL ಕಾರ್ಡ್ ಪರಿಷ್ಕರಣೆ ಮಾಡಿ ಕಡಿತ ಆರ್ಥಿಕ ಹೊರೆ ತಗ್ಗಿಸಲು ಸಹಾಯವಾಗುತ್ತೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಗ್ಯಾರಂಟಿ?
ಗ್ಯಾರಂಟಿಯನ್ನ ಮಿಸ್ ಯೂಸ್ ಮಾಡಿಕೊಳ್ಳಬಾರದು:
ಗ್ಯಾರಂಟಿ ಪರಿಷ್ಕರಣೆ ಮಾಡಬೇಕು ಎಂಬ ಸಚಿವ ಹೆಚ್.ಕೆ.ಮುನಿಯಪ್ಪ ಹೇಳಿಕೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು,ಪರಿಷ್ಕರಣೆ ಬಗ್ಗೆ ಸಚಿವರು ಮಾತನಾಡಿದ್ದರೆ ಅದು ಅವರ ವೈಯುಕ್ತಿಕ , ನಾನು ಮಿಸ್ ಯೂಸ್ ಆಗಬಾರದು ಅಂತ ಹೇಳುತ್ತೇನೆ ಏನೇ ತೀರ್ಮಾನ ಮಾಡಿದರು ನಮ್ಮ ಸರ್ಕಾರ ಮಾಡುತ್ತದೆ ಎಂದರು. ಅಲ್ಲದೆ ಕೆಲವು ಅನರ್ಹರೂ ಕೂಡ ಯೋಜನೆಗಳ ಲಾಭ ಪಡೆಯುತ್ತಾರೆ, ಆ ರೀತಿ ದುರ್ಬಳಕೆ ಆಗುವುದು ತಪ್ಪಿಸಬೇಕು. ಗ್ಯಾರಂಟಿ ನಿಲ್ಲಿಸುವುದಿಲ್ಲ
ಎಂದರು.