ದೇವನಹಳ್ಳಿ: ಫೈನಾನ್ಸ್ ಸಿಬ್ಬಂದಿ ಹಣ ಕಟ್ಟಿಲ್ಲ ಎಂಬ ಕಾರಣಕ್ಕೆ ಜಾನುವಾರು ಸಮೇತ ಮನೆಗೆ ಬೀಗ ಹಾಕಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ನಡೆದಿದೆ.
ಜನಸ್ಮಾಲ್ ಪೈನಾನ್ಸ್ ಸಿಬ್ಬಂದಿ ಕೊಟ್ಟ ಕಾಟದಿಂದ ನಾಗಪ್ಪ ಮತ್ತು ಜಯಲಕ್ಷ್ಮಮ್ಮ ಅನ್ನೂ ವೃದ್ದ ದಂಪತಿಗಳು ಪರದಾಡಿದ್ದಾರೆ. ಕುರಿ ಮೇಕೆಗಳ ಸಮೇತ ಖಾಸಗಿ ಪೈನಾನ್ಸ್ ಸಿಬ್ಬಂದಿ ಮನೆಗೆ ಬೀಗ ಜಡಿದ್ದಾರೆ. ಈ ಕಾರಣದಿಂದಾಗಿ ಕಳೆದ ಎರಡು ತಿಂಗಳಿಂದ ಏಣಿ ಮೂಲಕ ಮಹಡಿ ಮೇಲೆ ಹತ್ತಿ ಜಾನುವಾರುಗಳಿಗೆ ಮೇವು ನೀರನ್ನು ನೀಡುತ್ತಿದ್ದಾರೆ. ದಂಪತಿಗಳು ಮನೆಯ ಹೊರಗೆ ಮಲಗುತ್ತಿದ್ದಾರೆ.
ಇದನ್ನೂ ಓದಿ: ದರ್ಶನ್‌ಗಾಗಿ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ: ನಟ ಜಗ್ಗೇಶ್
ಜಾನುವಾರುಗಳು ಮನೆ ಒಳಗಡೆಯಿದೆ ಅಂದ್ರು ಖಾಸಗಿ ಪೈನಾನ್ಸ್ ಸಿಬ್ಬಂದಿಗಳು ಸ್ಥಳಕ್ಕೆ ಬಂದಿಲ್ಲ. ಇರೋ ಒಂದು ಮನೆಗೂ ಬೀಗ ಜಡಿದಿದ್ದಾರೆ ಅಂತ ವೃದ್ದ ದಂಪತಿಯ ಕಣ್ಣೀರು ಹಾಕಿದ್ದಾರೆ.
ಇನ್ನು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ದೇವನಹಳ್ಳಿ ತಹಶಿಲ್ದಾರ್ ಅವರು, ಮನೆಯ ಬೀಗ ಒಡೆಸಿ ಬಂಧನ ಮುಕ್ತ ಮಾಡಿದ್ದಾರೆ. ಸಾಲದ ವಿಚಾರವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.