ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್, ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಚಂದನ್ ಗೆ ಅವಾಜ್ ಹಾಕಿದ್ದರು ಎನ್ನಲಾಗಿದೆ.
ಹತ್ಯೆ ಬಳಿಕ ಮೈಸೂರಿಗೆ ತೆರಳಿದ್ದ ದರ್ಶನ್, ಈ ಪ್ರಕರಣದಲ್ಲಿ ತನ್ನದೇನು ಪಾತ್ರ ಇಲ್ಲ, ನಮ್ಮ ಹುಡುಗರು ಮಾಡಿದ್ದು ಎಂದು ಹೇಳಿದ್ದರಂತೆ, ಅಷ್ಟೇ ಅಲ್ಲದೆ, ಪ್ರಕರಣದಲ್ಲಿ ತನ್ನ ಹೆಸರು ಬರದಂತೆ ನೋಡಿಕೊಳ್ಳಲು 30 ಲಕ್ಷ ರೂಪಾಯಿಗೆ ಡೀಲ್ ಕುದುರಿಸಲೂ ಪ್ರಯತ್ನ ಮಾಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಅನ್ನಭಾಗ್ಯ: ಹೆಚ್ಚುವರಿ ಅಕ್ಕಿ ಬದಲಿಗೆ ಎಣ್ಣೆ, ಬೇಳೆ ಸಕ್ಕರೆ?
ಈ ಸಂಬಂಧ ಹಲವು ಪ್ರಭಾವಿ ವ್ಯಕ್ತಿಗಳ ಮೂಲಕ ಎಸಿಪಿ ಚಂದನ್ ಗೆ ಕರೆ ಮಾಡಿಸಿ, ಪ್ರಭಾವ ಬೀರಲು ಪ್ರಯತ್ನ ಮಾಡಿದ್ದ. ಕೊನೆಗೆ ದರ್ಶನ್ ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆತಂದಾಗಲೂ ದರ್ಶನ್, ನೀವು ಬರ್ತೀರಾ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಈ ಪ್ರಕರಣದಲ್ಲಿ ಸುಮ್ಮನೆ ನನ್ನನ್ನು ಸಿಲುಕಿಸಲು ಪ್ರಯತ್ನ ಮಾಡುತ್ತಿದ್ದೀರಾ ಎಂದು ಎಗರಾಡಿದ್ದನಂತೆ., ಕೊನೆಗೆ ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವ ವಿಡಿಯೋ, ಕಾಲ್ ಡೀಟೈಲ್ಸ್ ತೋರಿಸುತ್ತಿದ್ದಂತೆ ದರ್ಶನ್ ಸೈಲೆಂಟ್ ಆಗಿದ್ದಾನೆ.
ಈ ಕೇಸ್ ನಲ್ಲಿ ಲಾಕ್ ಆಗುತ್ತೇನೆ ಎಂದುಕೊಂಡಿರಲಿಲ್ಲ. ಹೇಗಾದರೂ ಮಾಡಿ ಬಚಾವ್ ಮಾಡಿ ಎಂದು ಎಸಿಪಿ ಚಂದನ್ ಗೆ ಪರಿಪರಿಯಾಗಿ ಬೇಡಿಕೊಂಡಿದ್ದ ಎಂದೂ ಸಹ ಹೇಳಲಾಗುತ್ತಿದೆ. ಆದರೆ, ಪೊಲೀಸರು ಯಾವುದೇ ಒತ್ತಡಕ್ಕೂ ಮಣಿಯದೆ ಸಣ್ಣಪುಟ್ಟ ಸಾಕ್ಷಿಗಳನ್ನೂ ಸಹ ಬಿಡದೆ ಕೇಸ್ ಬಿಲ್ಡಪ್ ಮಾಡಿದ್ದಾರೆ. ಇದೀಗ ಎಫ್ ಎಸ್ ಎಲ್ ವರದಿಯೂ ಪೊಲೀಸರ ಕೈ ಸೇರಿದ್ದು, ದರ್ಶನ್ ಅಂಡ್ ಗ್ಯಾಂಗ್ ಪೂರ್ಣ ಪ್ರಮಾಣದಲ್ಲಿ ಲಾಕ್ ಆಗಿದೆ.