Friday, September 20, 2024

ಪೊಲೀಸರ ಮೇಲಿನ ಸಿಟ್ಟಿಗೆ ವಿಧಾನಸೌಧದ ಮುಂಭಾಗ ತನ್ನ ಬೈಕ್‌ಗೆ ಬೆಂಕಿ ಇಟ್ಟ ಯುವಕ

ಬೆಂಗಳೂರು: ಪೊಲೀಸರು ತಾಯಿಗೆ ಬೈದಿದ್ದಕ್ಕೆ ಪೊಲೀಸರ ಮೇಲಿನ ಕೋಪಕ್ಕೆ ತನ್ನ ಬೈಕ್‌ಗೆ ಮಗ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ವಿಧಾನಸೌಧದ ಬಳಿ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮೂಲದ ಪೃಥ್ವಿರಾಜ್ ಎಂಬಾತ ಕೃತ್ಯವೆಸಗಿದ್ದಾನೆ. ಬೆಂಗಳೂರಿನ ವಿಧಾನಸೌಧ ಹಾಗು ಹೈಕೋರ್ಟ್​ ನಡುವಿನ ರಸ್ತೆಯಲ್ಲಿ ಬೈಕ್​ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಇದನ್ನೂ ಓದಿ: ದರ್ಶನ್‌ಗಾಗಿ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ: ನಟ ಜಗ್ಗೇಶ್​

ಬೆಂಕಿ ಹಚ್ಚಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರೋ ಪೃಥ್ವಿ, ನಾನು ಕೆಲದಿನಗಳ ಹಿಂದೆ ಟ್ರಿಪ್‌ ಹೋಗಿದ್ದೆ, ಆಗ ಮಳೆಗೆ ನೆಂದು ನನ್ನ ಫೋನ್‌ ಸ್ವಿಚ್ ಆಫ್‌ ಆಗಿತ್ತು. ಆಗ ನನ್ನ ತಾಯಿ ನಾನು ಕಾಣ್ತಿಲ್ಲ ಎಂದು ಪೊಲೀಸ್‌ ಠಾಣೆಗೆ ದೂರು ಕೊಡಲು ಹೋಗಿದ್ರು, ಆದ್ರೆ ಪೊಲೀಸರು ಕಂಪ್ಲೆಂಟ್‌ ತೆಗೆದುಕೊಳ್ಳದೇ ನನ್ನ ತಾಯಿಗೆ ಬೈದು, ದರ್ಪ ತೋರಿದ್ದಾರೆ. ಬಳಿಕ ನಾನು ಮನೆಗೆ ಬಂದ ಮೇಲೆ ಈ ವಿಚಾರ ನನಗೆ ತಿಳಿಯಿತು. ಇದನ್ನು ಪೊಲೀಸ್​ರ ಬಳಿ ಪ್ರಶ್ನೆ ಮಾಡಿದೆ. ಆಗ ನನ್ನನ್ನು ನನ್ನ ತಾಯಿಯ ಎದುರೇ ನಾಯಿಗೆ ಹೊಡೆದಂತೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾನೆ.

RELATED ARTICLES

Related Articles

TRENDING ARTICLES