ಹೊಸದಾಗಿ ಮದುವೆಯಾಗಿ ಮೊದಲ ಬಾರಿಗೆ ಮಾವನ ಮನೆಗೆ ಬಂದ ಅಳಿಯನಿಗೆ ನೂರು ಬಗೆಯ ಖಾದ್ಯಗಳನ್ನು ಮುಂದಿಟ್ಟು ಶಾಕ್ ನೀಡಿದ್ದಾರೆ. ಈ ಘಟನೆ ನಡೆದಿರುವುದು ನೆರೆಯ ಆಂಧ್ರಪ್ರದೇಶದ ವಿಜಯವಾಡದಲ್ಲಿ. ಆಂಧ್ರಪ್ರದೇಶದಲ್ಲಿ ಬಹಳ ಹಿಂದಿನಿಂದ ಒಂದು ವಿಶೇಷ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಅದೇನೆಂದರೆ, ಮದುವೆಯಾಗಿ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಉಣಬಡಿಸುವುದು.
ಆಂಧ್ರದ ಕಾಕಿನಾಡದಲ್ಲಿ ಮನೆಗೆ ಬಂದ ಹೊಸ ಅಳಿಯನಿಗೆ ಅತ್ತೆ 100 ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್ ಸುಧೀರ್- ಸೋನಲ್ ಮಂಥೆರೊ ಜೋಡಿ
ಕಾಕಿನಾಡ ಜಿಲ್ಲೆಯ ಕಿರ್ಲಂಪುಡಿ ಮಂಡಲದ ತಾಮರದ ಗ್ರಾಮದ ರತ್ನಕುಮಾರಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಕಿನಾಡ ನಗರದ ರವಿತೇಜ ಅವರನ್ನು ವಿವಾಹವಾಗಿದ್ದರು. ಆದರೆ, ಮದುವೆಯ ನಂತರ ಆಷಾಢ ಮಾಸ ಮುಗಿದು ಅಳಿಯ ಮೊದಲಬಾರಿಗೆ ಅತ್ತೆಯ ಮನೆಗೆ ಬಂದಾಗ ಅತ್ತೆಯು ತನ್ನ ಅಳಿಯನಿಗೆ ಭರ್ಜರಿ ಊಟವನ್ನು ಸಿದ್ಧಪಡಿಸಿದರು. ಬರೋಬ್ಬರಿ ನೂರು ಬಗೆಯ ತಿನಿಸುಗಳನ್ನು ಅಳಿಯನ ಮುಂದೆ ಉಣಬಡಿಸಲಾಗಿತ್ತು. ತನ್ನ ಮುಂದೆ ವಿವಿಧ ಖಾದ್ಯಗಳನ್ನು ನೋಡಿದ ಅಳಿಯ ಯಾವುದನ್ನು ತಿನ್ನುವುದು ಮತ್ತು ಯಾವುದನ್ನು ಬಿಡುವುದು ಎಂಬ ಗೊಂದಲಕ್ಕೆ ಒಳಗಾದರು. ಅಲ್ಲದೆ, ತನ್ನ ಅತ್ತೆ ತನಗಾಗಿ ವಿವಿಧ ಬಗೆಯ ಅಡುವ ಮಾಡಿದಕ್ಕೆ ಹರ್ಷ ವ್ಯಕ್ತಪಡಿಸಿದರು. ಇದೀಗ ಈ ಘಟನೆಯ ವಿಡಿಯೋ ವೈರಲ್ ಆಗಿದೆ.
100 రకాల పిండి వంటలతో అల్లుడికి మర్యాద
ఆషాడం ముగిసిన తర్వాత తొలిసారి ఇంటికి వచ్చిన అల్లుడికి 100 రకాల పిండి వంటలు చేసి పెట్టిన అత్తామామలు
కాకినాడ జిల్లా కిర్లంపూడి మండలం తామరాడ గ్రామానికి చెందిన రత్నకుమారికి కాకినాడకు చెందిన రవితేజకు గత ఏడాది సెప్టెంబర్లో వివాహం జరిగింది.… pic.twitter.com/fNx5Q6KlkC
— Telugu Scribe (@TeluguScribe) August 11, 2024