ಬೆಂಗಳೂರು: ಕನ್ನಡದ ಹಿಟ್ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್ ಹಾಗೂ ಕನ್ನಡದ ನಟಿ ಸೋನಲ್ ಮಂಥೆರೊ ಇಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತರುಣ್ ಸುಧೀರ್-ಸೋನಲ್ ಮಂಥೆರೊ ಜೋಡಿ ಗುರು ಹಿರಿಯರು, ಸ್ನೇಹಿತರು, ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆ ಚಿತ್ರರಂಗದ ಗಣ್ಯರು ಆಗಮಿಸಿ ಶುಭಕೋರಿದ್ದಾರೆ. ಈ ಮದುವೆಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಈ ಜೋಡಿಯ ಹೊಸ ಜೀವನಕ್ಕೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಇದನ್ನೂ ಓದಿ: ಎಂಗೇಜ್ ಆದ ಜೋಡಿ ಬಗ್ಗೆ ಅಪಸ್ವರ: ಚೈತು-ಶೋಭಿತಾ ಬಗ್ಗೆ ವೇಣುಸ್ವಾಮಿ ಶಾಕಿಂಗ್ ಭವಿಷ್ಯ!
ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಮದುವೆ ಸಮಾರಂಭ ನಡೆಯುತ್ತಿದೆ. ತರುಣ್ ಸುಧೀರ್ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ನಟ ಶರಣ್ ದಂಪತಿ, ನಟಿ ಶೃತಿ ಕುಟುಂಬಸ್ಥರು, ನೆನಪಿರಲಿ ಪ್ರೇಮ್ ದಂಪತಿ ಸೇರಿದಂತೆ ಇನ್ನೂ ಹಲವಾರು ಸ್ಮಾರ್ ನಟ ನಟಿಯರು ಬಂದಿದ್ದಾರೆ.