Friday, September 20, 2024

ಎಂಗೇಜ್ ಆದ ಜೋಡಿ ಬಗ್ಗೆ ಅಪಸ್ವರ: ಚೈತು-ಶೋಭಿತಾ ಬಗ್ಗೆ ವೇಣುಸ್ವಾಮಿ ಶಾಕಿಂಗ್ ಭವಿಷ್ಯ!

ನಾಗಚೈತನ್ಯ ಮತ್ತು ಶೋಭಿತಾ ಎಂಗೇಜ್​ ಮೆಂಟ್ ಸದ್ಯ ಟಾಲಿವುಡ್​​ನಲ್ಲಿ ಹಾಟ್ ಟಾಪಿಕ್. ಚಿತ್ರರಂಗದ ತಾರೆಯರು, ಅಭಿಮಾನಿಗಳು ಈ ಯುವಜೋಡಿಗೆ ಅಭಿನಂದನೆ ಹೇಳ್ತಾ ಇದ್ದಾರೆ. ಆದ್ರೆ ಆಂಧ್ರದ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಮಾತ್ರ ಇವರ ಬಗ್ಗೆ ಅಪಸ್ವರ ಎತ್ತಿದ್ದಾನೆ. ಹಿಂದೆ ಸಮಂತಾ-ಚೈತು ಡಿವೋರ್ಸ್ ಬಗ್ಗೆ ಹೇಳಿದ್ದ ಈತ ಈಗ ಶೋಭಿತಾ ಚೈತು ಜಾತಕವೂ ಸೆಟ್ ಆಗಲ್ಲ ಅಂದಿದ್ದಾನೆ.

ಯೆಸ್ ಟಾಲಿವುಡ್​​ನಲ್ಲೀಗ ನಾಗಚೈತನ್ಯ ಮತ್ತು ಶೋಭಿತಾರ ಎಂಗೇಜ್​​ಮೆಂಟ್​ನದ್ದೇ ದೊಡ್ಡ ಸುದ್ದಿ. ಕಳೆದ 2 ವರ್ಷಗಳಿಂದಲೂ ಗುಟ್ಟಾಗಿ ಡೇಟಿಂಗ್ ಮಾಡ್ತಾ ಇದ್ದ ಈ ಜೋಡಿ ಕೊನೆಗೂ ಆಫೀಷಿಯಲ್ ಆಗಿ ಎಂಗೇಜ್ ಆಗಿದೆ.

ಗುರುವಾರ ಹೈದ್ರಾಬಾದ್​​ನಲ್ಲಿ ನಾಗಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥ ನೆರವೇರಿದ್ದು , ಖುದ್ದು ನಾಗಾರ್ಜುನ ಪುತ್ರನ ಎಂಗೇಂಜ್​ಮೆಂಟ್ ಫೋಟೊಗಳನ್ನ ಹಂಚಿಕೊಂಡು ನವಜೋಡಿಗೆ ಆಶಿರ್ವಾದ ಮಾಡಿದ್ದಾರೆ. ನಾಗಚೈತನ್ಯ ಮತ್ತು ಶೋಭಿತಾ ಅವರ ನಿಶ್ಚಿತಾರ್ಥದ ವಿಚಾರ ಹಂಚಿಕೊಳ್ಳೋದಕ್ಕೆ ಖುಷಿಯಾಗುತ್ತೆ. ಶೋಭಿತಾನ ನಮ್ಮ ಕುಟುಂಬಕ್ಕೆ ಬರಮಾಡಿಕೊಳ್ತಾ ಇರೋದಕ್ಕೆ ತುಂಬಾ ಖುಷಿ ಇದೆ ಅಂತ ನಾಗಾರ್ಜುನ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮದ್ಯಪ್ರಿಯರಿಗೆ ಸಿಹಿ ಸುದ್ದಿ: ಆಗಸ್ಟ್​ 15ರಿಂದ ವಿಶೇಷವಾದ ‘ಹುಲಿ’ ರಮ್​ ಲಭ್ಯ!

ನಾಗ ಚೈತನ್ಯ ತಮ್ಮ ಹೈದರಾಬಾದ್‌ನ ಮನೆಯಲ್ಲಿ ಶೋಭಿತಾರಿಗೆ ಉಂಗುರ ತೊಡಿಸಿದ್ದಾರೆ. ಈ ಸಮಾರಂಭದಲ್ಲಿ ಕೆಲವೇ ಕೆಲವು ಜನರು ಭಾಗಿಯಾಗಿದ್ದಾರೆ. ಚಿತ್ರರಂಗದ ಸ್ನೇಹಿತರಿಗೆ ಆಹ್ವಾನ ನೀಡಿಲ್ಲ. ಸದ್ಯ ಖಾಸಗಿ ಸಮಾರಂಭದಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡಿರೋ ಈ ಜೋಡಿ ಮುಂದಿನ ವರ್ಷ ಮದುವೆಯಾಗಲಿದ್ದಾರಂತೆ.

ಸದ್ಯ ಈ ಜೋಡಿಗೆ ಎಲ್ಲರೂ ಶುಭಹಾರೈಸ್ತಾ ಇದ್ದಾರೆ. ಆದ್ರೆ ತೆಲುಗಿನ ಕುಖ್ಯಾತ ಜ್ಯೋತಿಷಿ ವೇಣುಸ್ವಾಮಿ ಮಾತ್ರ ಇವರ ಜಾತಕ ವಿಶ್ಲೇಷಣೆ ಮಾಡಿ ಇವರ ಜೋಡಿ ಸರಿಯಿಲ್ಲ ಎಂದಿದ್ದಾನೆ. ಕಳೆದ ವಿಧಾನಸಭಾ ಚುನಾವಣೆಯ ವೇಳೆ ತನ್ನ ಭವಿಷ್ಯ ಸುಳ್ಳಾದಾಗ ಇನ್ನು ಮುಂದೆ ಭವಿಷ್ಯ ಹೇಳಲ್ಲ ಅಂತ ಪ್ರತಿಜ್ಞೆ ಮಾಡಿದ್ದ ಈತ, ಈಗ ಆ ಪ್ರತಿಜ್ಞೆಯನ್ನ ಮುರಿದು ಮತ್ತೆ ಭವಿಷ್ಯ ಹೇಳೋದಕ್ಕೆ ಶುರುಮಾಡಿದ್ದಾನೆ. ಇವನ ಜ್ಯೋತಿಷ್ಯದ ಸೆಕೆಂಡ್ ಇನ್ನಿಂಗ್ಸ್​​ಗೆ ಬಲಿಯಾಗಿರೋದೇ ಚೈತನ್ಯ ಮತ್ತು ಶೋಭಿತಾ,.

ಈ ಇಬ್ಬರ ಜಾತಕವನ್ನೂ ಬರೆದು ವಿಶ್ಲೇಷಣೆ ಮಾಡಿರೋ ಈತ ಇವರಿಬ್ಬರು ಸುತಾರಾಂ ಒಂದಾಗಿರೋದಕ್ಕೆ ಸಾದ್ಯ ಇಲ್ಲ ಅಂತ ಹೇಳಿದ್ದಾನೆ. ಸಮಂತಾ, ಶೋಭಿತಾ ಜಾತಕಗಳನ್ನು ನೋಡಿದರೆ ಇಬ್ಬರ ಜಾತಕಗಳಲ್ಲಿ ಶನಿ ದೃಷ್ಟಿ ಕುಜನ ಮೇಲಿದೆ. ಶೋಭಿತಾ ಜಾತಕದಲ್ಲಿ ಶನಿ ದೃಷ್ಟಿ ಶುಕ್ರ, ಗುರುವಿನ ಮೇಲೆಯೂ ಇದೆ. ಇದನ್ನು ನೋಡಿದರೆ 2027ರಿಂದ ಸಮಸ್ಯೆ ಎದುರಾಗುವಂತಿದೆ. ಅಲ್ಲಿಯವರೆಗೂ ಚೈತು-ಶೋಭಿತಾ ದಾಂಪತ್ಯ ಜೀವನ ಚೆನ್ನಾಗಿರುತ್ತೆ. ಇವರಿಬ್ಬರ ದಾಂಪತ್ಯ ಜೀವನದಲ್ಲಿ ಒಬ್ಬ ಸ್ತ್ರೀ ಕಾರಣಕ್ಕೆ ಸಮಸ್ಯೆ ಶುರುವಾಗುತ್ತದೆ ಅಂತ ವೇಣುಸ್ವಾಮಿ ಹೇಳಿದ್ದಾನೆ.

ಇದನ್ನೂ ಓದಿ: ಚೈತು 2nd ಇನ್ನಿಂಗ್ಸ್: ಸಮಂತಾ ಹಾರ್ಟ್​ ಬ್ರೇಕ್​!

ಅಸಲಿಗೆ ಈ ವೇಣುಸ್ವಾಮಿ ಫೇಮಸ್ ಆಗಿದ್ದೇ ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಬಗ್ಗೆ ಹೇಳಿ. ಸಮಂತಾ ಮತ್ತು ನಾಗಚೈತನ್ಯ 2017ರಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ರು. ಸಿನಿರಂಗದ ಈ ಮುದ್ದಾದ ನಾಯಕ ನಾಯಕಿ ಕೈ ಹಿಡಿದಾಗ ಅಭಿಮಾನಿಗಳೆಲ್ಲಾ ಖುಷಿ ಪಟ್ಟಿದ್ರು. ಆದ್ರೆ ಆಗಲೂ ಈ ವೇಣುಸ್ವಾಮಿ ಇವರ ವಿಚ್ಚೇದನ ಆಗುತ್ತೆ ಅಂತ ಹೇಳಿಬಿಟ್ಟಿದ್ದ.

ದುರದೃಷ್ಟವಶಾತ್ 2021ರಲ್ಲಿ ಸ್ಯಾಮ್- ಚೇ ಡಿವೋರ್ಸ್ ಪಡೆದರು. ಆಗ ಈತ ಮಾಧ್ಯಮಗಳ ಮುಂದೆ ಬಂದು, ನೋಡಿದ್ರಲ್ಲಾ ನಾನು ಹೇಳಿದ್ದು ಸತ್ಯವಾಯ್ತು ಅಂತ ಜಂಬ ಕೊಚ್ಚಿಕೊಂಡಿದ್ದ. ಇವನು ನಿಜಕ್ಕೂ ಪವರ್​ಫುಲ್ ಜ್ಯೋತಿಷಿ ಇರಬಹುದು ಅಂತ ಜನ ಕೂಡ ಇವನನ್ನ ನಂಬೋದಕ್ಕೆ ಶುರುಮಾಡಿದ್ರು.

ಆದ್ರೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಈತನ ಭವಿಷ್ಯ ಸುಳ್ಳಾದ ಮೇಲೆ ಇವನೊಬ್ಬ ಢೋಂಗಿ ಜ್ಯೋತಿಷಿ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಆದ್ರೂ ಜನಪ್ರೀಯತೆಗೋಸ್ಕರ ಚಿತ್ರತಾರೆಯರ ಬಗ್ಗೆ ಈತ ಮಾತನಾಡ್ತಾನೇ ಇರ್ತಾನೆ. ಸದ್ಯಕ್ಕಂತೂ ಈಗಷ್ಟೇ ಎಂಗೇಜ್ ಆದ ಜೋಡಿ ಬಗ್ಗೆ ಕೆಟ್ಟ ಮಾತನಾಡಿರೋ ಈತನಿಗೆ ಅಭಿಮಾನಿಗಳು ಛೀಮಾರಿ ಹಾಕ್ತಾ ಇದ್ದಾರೆ.

ಅಮೀತ್, ಫಿಲ್ಮ್ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES