ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಕೃತ್ಯ ಮುಚ್ಚಿ ಹಾಕಲು ಪ್ರಯತ್ನ ನಡೀತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಜ್ವಲ್ ಕೃತ್ಯ ಮುಚ್ಚಿ ಹಾಕಲು HDK ಇದನ್ನ ಮಾಡ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಡಸ್ತನ ಹೇಳಿಕೆಗೆ ಪ್ರಿಯಾಂಕ್ ತಿರುಗೇಟು ನೀಡಿದ್ದಾರೆ. ಇವತ್ತಿನ ಮೈಸೂರು ಸಮಾವೇಶದಲ್ಲಿ ಗಂಡಸ್ತನದ ಬಗ್ಗೆ ಮಾತಾಡಲಿ. ಮತ್ತು ಫೋಕ್ಸೊ ಪ್ರಕರಣ, ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡಲಿ. ಆಗ ನಿಮ್ಮ ಗಂಡಸ್ತನವನ್ನ ನಾವೂ ಒಪ್ಪುತ್ತೇವೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಗುಡುಗಿದ್ದಾರೆ.
ಇದನ್ನೂ ಓದಿ: ಇನ್ನು 6 ತಿಂಗಳಲ್ಲಿ BJP-JDSನ ಅರ್ಧ ಜನ ಜೈಲಿನಲ್ಲಿರ್ತಾರೆ: ಪ್ರಿಕಾಂಕ್ ಖರ್ಗೆ ಹೊಸ ಬಾಂಬ್
ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡ್ತಿಲ್ಲ:
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕೊಡೋದಿಕ್ಕೆ ಆಸಕ್ತಿ ತೋರ್ತಿದ್ದಾರೆ. ರಾಜ್ಯಪಾಲರು ಯಾಕೆ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ಗೆ ಕೊಡ್ತಿಲ್ಲ. ಇನ್ನು ಜೊಲ್ಲೆ, ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡ್ತಿಲ್ಲ ಯಾಕೆ? ಎಂದು ಪ್ರಶ್ನಿಸಿದ್ರು. ಹಾಗೂ ಬೇರೆ ಯಾರೂ ಅಲ್ಲ ತನಿಖಾ ತಂಡಗಳು ಮನವಿ ಕೊಟ್ಟಿರೋದು. ಇದನ್ನೆಲ್ಲ ಇದ್ರೂ ರಾಜ್ಯಪಾಲರು ಒಪ್ಪಿಗೆ ಕೊಡ್ತಿಲ್ಲ ಎಂದು ಕಿಡಿಕಾರಿದ್ದಾರೆ.