ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಇಂದಿಗೆ 50 ದಿನಗಳು ಕಳೆದಿವೆ.
ತನ್ನ ಗೆಳತಿ ಪವಿತ್ರಾಗೌಡಳಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕೆ ದರ್ಶನ್ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ದರ್ಶನ್ ಸೇರಿ ಆತನ ಸಹಚರರು ಜೈಲು ಪಾಲಾಗಿದ್ದಾರೆ. ಜೂನ್ 22 ರಂದು ನಟ ದರ್ಶನ್ ಆ್ಯಂಡ್ ಗ್ಯಾಂಗ್ ಜೈಲುಪಾಲಾಗಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಕೊಲೆ ಮಾಡಿರುವುದು ದೃಢ?
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ದೊಡ್ಡ ಸಂಚನಲ ಸೃಷ್ಠಿಸಿತ್ತು. ಕಾರಣ ಕೊಲೆ ಆರೋಪ ಸ್ಯಾಂಡಲ್ವುಡ್ನ ದೊಡ್ಡ ಸ್ಟಾರ್ ನಟ ದರ್ಶನ್ ಅವರ ಮೇಲಿತ್ತು ಹೀಗಾಗಿ ಈ ಕೇಸ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಸದ್ಯ ಈ ಪ್ರಕರಣ ಮತ್ತೊಂದು ದೊಡ್ಡ ಸಾಕ್ಷ್ಯ ಸಿಕ್ಕಿದ್ದು ದರ್ಶನ್ಗೆ ದೊಡ್ಡ ಕಂಟಕ ಎದುರಾಗುವುದು ಪಕ್ಕಾ ಆಗಿದೆ. ಪೊಲೀಸರು ಕಳಿಸಿದ್ದ ಎಫ್ಎಸ್ಎಲ್ ವರದಿ ಹೊರಬಿದ್ದಿದ್ದು. ದರ್ಶನ್ ಬಟ್ಟೆ ಮೇಲೆ ಇದ್ದ ರಕ್ತದ ಕಲೆಯು ಕೊಲೆಯಾದ ರೇಣುಕಾಸ್ವಾಮಿ ದೇಹದ ರಕ್ತದ ಕಲೆಗಳಾಗಿವೆ ಎಂದು FSL ವರದಿಯಿಂದ ದೃಢಪಟ್ಟಿದೆ.
ಪೊಲೀಸರು ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡಿದ್ದ ನೀಲಿ ಬಣ್ಣ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ರೌಂಡ್ ನೆಕ್ ಟಿ-ಶರ್ಟ್ ಅನ್ನ FSLಗೆ ಕಳಿಸಿದ್ದರು. ತನಿಖೆಯಲ್ಲಿ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಭಾಗಿಯಾಗಿದ್ದರು ಎಂಬುದುಕ್ಕೆ ಅತ್ಯಂತ ಮಹತ್ವ ಪೂರ್ಣ ಸಾಕ್ಷ್ಯ ಸಿಕ್ಕಿದೆ ಎಂಬುದನ್ನ ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಪವರ್ ಟಿವಿಗೆ ಖಚಿತಪಡಿಸಿದೆ.