ಹಾಸನ ಜಿಲ್ಲೆ ಸಕಲೇಶಪುರದಲ್ಲಿ ರೈಲು ಮಾರ್ಗದ ಮೇಲೆ ಗುಡ್ಡ ಕುಸಿತವಾದ ಹಿನ್ನೆಲೆ ರೈಲು ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ಮಂಗಳೂರಲ್ಲಿ ನಡೆಯುತ್ತಿದ್ದ ಏರ್ ಫೋರ್ಸ್ ಪರೀಕ್ಷೆ ಬರೆಯಲು ತೆರಳುತ್ತಿದ್ದ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ತೆರಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ವಿದ್ಯಾರ್ಥಿಗಳು ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: ಇನ್ನು 6 ತಿಂಗಳಲ್ಲಿ BJP-JDSನ ಅರ್ಧ ಜನ ಜೈಲಿನಲ್ಲಿರ್ತಾರೆ: ಪ್ರಿಕಾಂಕ್ ಖರ್ಗೆ ಹೊಸ ಬಾಂಬ್
ಪರೀಕ್ಷೆಗಾಗಿ ಬೆಂಗಳೂರಿನಿಂದ ಮಂಗಳೂರಿಗೆ ಟ್ರೈನ್ನಲ್ಲಿ ಹೋಗುತ್ತಿದ್ದ ರಾಜಸ್ಥಾನ ಮೂಲದ ರಾವತ್ ಎಂಬಾತ ಟ್ವಿಟ್ಟರ್ನಲ್ಲಿ ಬೇಸರ ಹೊರಹಾಕಿದ್ದಾರೆ. ಇಂದು ಬೆಳಗ್ಗೆ 8 ಗಂಟೆಗೆ ಮಂಗಳೂರಿನ ಅಬ್ಬಕ್ಕ ಸರ್ಕಲ್ ಬಳಿಯ ಖಾಸಗಿ ಕಾಲೇಜಿನಲ್ಲಿದ್ದ ಪರೀಕ್ಷೆ ಇತ್ತು. ಭೂಕುಸಿತದ ಪರಿಣಾಮ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಮಾರ್ಗದಲ್ಲಿ ಸಿಲುಕಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಾಗಿದೆ. ಇದರಿಂದ ಪರೀಕ್ಷೆ ಸಮಯಕ್ಕೆ ಹಾಜರಾಗಲಾಗದೇ ಅಭ್ಯರ್ಥಿ ಪರದಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಮಣ್ಣು ತೆರವು ಕಾರ್ಯ ಚಾಲ್ತಿಯಲ್ಲಿರುವುದರಿಂದ ಬೆಂಗಳೂರು-ಮಂಗಳೂರು ನಡುವಿನ ರೈಲು 4 ಗಂಟೆಗಳ ಕಾಲ ತಡವಾಗಿ ಚಲಿಸುತ್ತದೆ. ಈ ಕಾರಣದಿಂದಾಗಿ ನನ್ನ ಪರೀಕ್ಷಾ ಕೇಂದ್ರವನ್ನು ತಲುಪಲು ನನಗೆ ಸಾಧ್ಯವಾಗುವುದಿಲ್ಲ. ಇದರ ಹೊಣೆ ಹೊರುವವರು ಯಾರು ಎಂದು ಪೋಸ್ಟ್ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ.