Friday, September 20, 2024

ಇನ್ನು 6 ತಿಂಗಳಲ್ಲಿ BJP-JDSನ ಅರ್ಧ ಜನ ಜೈಲಿನಲ್ಲಿರ್ತಾರೆ: ಪ್ರಿಯಾಂಕ್​ ಖರ್ಗೆ ಹೊಸ ಬಾಂಬ್​

ಬೆಂಗಳೂರು: ಬಿಜೆಪಿ ಅವಧಿಯ ಅಕ್ರಮಗಳ ತನಿಖೆ ಬೇರೆ ಬೇರೆ ಹಂತದಲ್ಲಿವೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಹೊಸ ಬಾಂಬ್​​ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಧ್ಯಂತರ ವರದಿಗಳು ಯಾವುದಕ್ಕೆ ಬಂದಿವೆಯೋ ಅವುಗಳ ಪರಿಶೀಲನೆ ನಡೀತಿದೆ. ಇದರ ಆಧಾರದಲ್ಲಿ ನಾವು ಕ್ರಮ ತಗೋತೀವಿ. ಇನ್ನಾರು ತಿಂಗಳು ಸಮಯ ಕೊಡಿ. ಬಿಜೆಪಿ ಮತ್ತು ಜೆಡಿಎಸ್​​ನ ಅರ್ಧ ಜನ ಜೈಲಿನಲ್ಲಿರ್ತಾರೆ. ಇನ್ನರ್ಧ ಜನ ಬೇಲ್​​​ನಲ್ಲಿರ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಕುಟುಂಬದ ಅನುಕೂಲಕ್ಕೆ ಎಲ್ಲರನ್ನು ಓಡಿಸಿಬಿಟ್ರು: ಡಿಕೆ ಶಿವಕುಮಾರ್​

ರಾಜ್ಯಪಾಲರ ಮೂಲಕ ಸರ್ಕಾರ ಉರುಳಿಸಲು ಸಂಚು:

ರಾಜ್ಯಪಾಲರ ಮೂಲಕ ಸರ್ಕಾರ ಉರುಳಿಸಲು ಸಂಚು ನಡೆಯುತ್ತಿದೆ. ರಾಜ್ಯಪಾಲರು ಸಾಂವಿಧಾನಿಕ ಅಧಿಕಾರ ದುರುಪಯೋಗ ಪಡಿಸಿಕೊಳ್ತಿದ್ದಾರೆ. ಯಾರೋ ದೂರು ಕೊಟ್ರು ಅಂತ ರಾಜ್ಯಪಾಲರು ಶೋಕಾಸ್ ನೊಟೀಸ್ ಕೊಟ್ರು ಎಂದು ಸಚಿವ ಪ್ರಿಯಾಂಕ್​ ಖರ್ಗೆ ಆರೋಪಿಸಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಇಲ್ಲಿ ರಾಜ್ಯಪಾಲರು ಮುರುಗೇಶ್​ ನಿರಾಣಿ ಮೇಲಿನ ದೂರು ಹಾಗೇ ಇಟ್ಕೊಂಡಿದ್ದಾರೆ. ಯಾಕೆ ಅದರ ಮೇಲೆ ಕ್ರಮ ತಗೋತಿಲ್ಲ. ರಾಜ್ಯಪಾಲರಿಗೆ ಸ್ಕ್ರಿಪ್ಟ್ ಎಲ್ಲಿಂದ ಬರ್ತಿದೆ. ಸ್ಕ್ರಿಪ್ಟ್ ಕೊಡ್ತಿರೋರು ಯಾರು. ರಾಜ್ಯಪಾಲರು ಕೆಲ ರಾಜ್ಯಗಳಲ್ಲಿ ಅವರ ಹುದ್ದೆಗೆ ತಕ್ಕುದಾಗಿ ನಡೀತಿಲ್ಲ ಎಂದು ಕಿಡಿಕಾರಿದರು. ಕೆಲ ರಾಜ್ಯಪಾಲರಿಗೆ ಕೋರ್ಟ್​ಗಳೇ ಛೀಮಾರಿ ಹಾಕಿವೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES