Friday, September 20, 2024

420 ಕುಮಾರ ಎಗರಿ ಬೀಳುತ್ತಿದ್ದಾರೆ: ಕಾಂಗ್ರೆಸ್​​​

ಕೇಂದ್ರ ಸಚಿವ H.D.ಕುಮಾರಸ್ವಾಮಿಯವರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​​ ಮಾಡಿದ ಕಾಂಗ್ರೆಸ್​, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ.

ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್​​​ ಬಂದು ಎದೆ ಮೇಲೆ ಒದ್ದನಂತೆ ಎನ್ನುವ ಆಡು ಮಾತಿನಂತೆ 420 ಕುಮಾರ ತಮ್ಮ ಹುಳುಕು ಹೊರಬಿದ್ದಾಗ ಎಗರಿ ಬೀಳುತ್ತಿದ್ದಾರೆ ಎಂದು ಲೇವಡಿ ಮಾಡಿದೆ. ಕುಮಾರಸ್ವಾಮಿಯವರೇ ಸಾಯಿ ವೆಂಕಟೇಶ್ವರ ಕಂಪೆನಿಗೆ ಕಾನೂನು ಬಾಹಿರವಾಗಿ ತಾವು ಗಣಿ ಗುತ್ತಿಗೆ ನೀಡಿದ್ದು ಏಕೆ. ನಿಮ್ಮ ಈ ಹಗರಣದ ಬಗ್ಗೆ ನಿಮ್ಮ ದೋಸ್ತಿ ನಾಯಕರಾದ ಯಡಿಯೂರಪ್ಪನವರೇ ಸದನದಲ್ಲಿ ಆರೋಪ ಮಾಡಿದ್ದರು. ಅದಕ್ಕೆ ತಮ್ಮ ಉತ್ತರವೇನು. ಲೋಕಾಯುಕ್ತದ ಪತ್ರ ಹೇಗೆ ಹೊರಬಿತ್ತು ಎಂದು ಕೇಳುವ ತಮ್ಮ ಡೋಂಗಿ ಪಾರದರ್ಶಕತೆ ಬಯಲಾಗಿದೆಯಲ್ಲವೇ ಎಂದು ಪವರ್​ ಟಿವಿ ವರದಿ ಉಲ್ಲೇಖಿಸಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಗಂಡಸ್ತನ ಪೆನ್​ಡ್ರೈವ್​ನಲ್ಲಿ ಎಲ್ಲಾಕಡೆ ಪ್ರದರ್ಶನ ಆಯ್ತಲ್ಲ: ಸಚಿವ ಪ್ರಿಯಾಂಕ್​ ಖರ್ಗೆ

ಅಧಿಕಾರಿಗಳು ಟೆಂಡರ್​ ಕೊಟ್ಟಿದ್ದು, ನಾನು ಕೇವಲ ರೆಕಮೆಂಡ್ ಮಾಡಿದ್ದು ಎನ್ನುತ್ತಿದ್ದೀರಿ. ಮುಖ್ಯಮಂತ್ರಿ ರೆಕಮೆಂಡ್ ಮಾಡಿದ್ದಕ್ಕೆ ಅಧಿಕಾರಿಗಳು ಮಣೆ ಹಾಕಿದ್ದಾರೆ ಎನ್ನುವುದನ್ನು ಏಕೆ ಮರೆಮಾಚುವಿರಿ ಎಂದು ಪ್ರಶ್ನಿಸಿದ್ದಾರೆ.

ದಶಕದ ಹಿಂದಿನ ಹಗರಣದ ವಿಷಯ ಈಗ ಕೆದಕಿದ್ದು ತಪ್ಪು ಎಂಬಂತೆ ಮಾತಾಡುತ್ತಿದ್ದೀರಿ, ದಶಕದ ಹಿಂದೆ ಸಿದ್ದರಾಮಯ್ಯನವರ ಕುಟುಂಬಕ್ಕೆ ಬಿಜೆಪಿ ಸರ್ಕಾರವೇ ಇದ್ದಾಗ ಮಂಜೂರಾದ ಸೈಟ್ ಗಳ ಬಗ್ಗೆ ತಾವು ಈಗ ಕೆದಕಿದ್ದೀರಿ, ಏಕೆ? ಈ ಹಿಂದೆ ಇದೇ ನಿಮ್ಮ ರೆಕಮೆಂಡೇಷನ್ ಸಹಿ ನನ್ನದಲ್ಲ ಎಂದು ಸುಳ್ಳು ಹೇಳಿದ್ದಿರಿ ಅಲ್ಲವೇ? ಮಾನ್ಯ 420ಕುಮಾರ ಅವರೇ, ನಿಮ್ಮ ಸಾಚಾತನದ ಮುಖವಾಡ ನಾಡಿನ ಜನರ ಮುಂದೆ ಕಳಚಿದೆ, ರಾಜೀನಾಮೆ ಯಾವಾಗ ಕೊಡುವಿರಿ ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಎಂದು ಕಿಡಿಕಾರಿದೆ.

RELATED ARTICLES

Related Articles

TRENDING ARTICLES