ದೊಡ್ಡಬಳ್ಳಾಪುರ: ನಾಡಿನೆಲ್ಲೆಡೆ ಇಂದು ನಾಗರಪಂಚಮಿ ಸಂಭ್ರಮ. ಈ ಹಿನ್ನೆಲೆ ಇಂದು ಮುಂಜಾನೆಯಿಂದಲೂ ತಾಲೂಕಿನ ಪ್ರಸಿದ್ದ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ನಾಗರಪಂಚಮಿ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಘಾಟಿ ಸುಬ್ರಹ್ಮಣ್ಯಕ್ಕೆ ಬೆಂಗಳೂರ ನಗರ ಸೇರಿದಂತೆ ನೆರೆಯ ಆಂಧ್ರದಿಂದಲೂ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಇಲ್ಲಿನ ನಾಗರ ಕಲ್ಲಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ಹರಕೆಗಳನ್ನು ತೀರಿಸುತ್ತಿದ್ದಾರೆ.
ಇದನ್ನೂ ಓದಿ: ಬೆಳ್ಳಿ ಗೆದ್ದ ಮಗ, ಹೃದಯ ಗೆದ್ದ ತಾಯಿ: ಪಾಕಿಸ್ತಾನದ ನದೀಮ್ ಕೂಡ ನನ್ನ ಮಗನಿದ್ದಂತೆ
ನಾಗರ ಪಂಚಮಿಯಂದು ಸುಬ್ರಮಣ್ಯನ ದರ್ಶನ ಮಾಡಿದರೇ ದೋಷಗಳು ನಿವಾರಣೆಯಾಗುವ ನಂಬಿಕೆ ಇಲ್ಲಿನ ಜನರಲ್ಲಿದೆ. ಜೊತೆಗೆ ಅಣ್ಣ ತಂಗಿ ಭಾಂಧವ್ಯ ಹೆಚ್ಚುತ್ತದೆ ಎನ್ನುವ ಪ್ರತೀತಿಯೂ ಇದೆ. ಹೀಗಾಗಿ ಘಾಟಿ ಸುಬ್ರಹ್ಮಣ್ಯದತ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ್ ಪಡೆಯುತ್ತಿದ್ದಾರೆ.