Saturday, September 28, 2024

ಶಾರ್ಟ್ ಸರ್ಕ್ಯೂಟ್​: ಬೆಂಕಿಗಾಹುತಿಯಾದ ಕಾರ್ಖಾನೆ

ಬೆಳಗಾವಿ: ಕಾರ್ಖಾನೆಯೊಂದರ ಲಿಫ್ಟ್​ನಲ್ಲಿ ಉಂಟಾದ ಶಾರ್ಟ್​ ಸರ್ಕಿಟ್​ನಿಂದ ಅಗ್ನಿ ಅವಘಡ ಸಂಭವಿಸಿ ಕಾರ್ಖಾನೆ ಬೆಂಕಿಗೆ ಆಹುತಿಯಾಗಿರುವ ಘಟನೆ ಬೆಳಗಾವಿಯ ನಾವಗೆ ಗ್ರಾಮದಲ್ಲಿ ನಡೆದಿದೆ.

ನಾವಗೆ ಗ್ರಾಮದ ಹೊರವಲಯದಲ್ಲಿರುವ ಸ್ನೇಹಂ ಟಿಕ್ಸೊ ಟೇಪ್​ ಎಂಬ ಬೃಹತ್​ ಕಾರ್ಖಾನೆ ಲಿಫ್ಟ್​ನಲ್ಲಿ ಶಾರ್ಟ್ ಸರ್ಕ್ಯೂಟ್ ಅವಘಡ ಸಂಭವಿಸಿತ್ತು. ನೋಡ ನೋಡುತ್ತಿದ್ದಂತೆ ಇಡೀ ಕಾರ್ಖಾನೆಗೆ ಬೆಂಕಿ ಆವರಿಸಿದೆ, ಬೆಂಕಿಯನ್ನು ಕಂಡ ಕಾರ್ಮಿಕರು ಕಾರ್ಖಾನೆಯಿಂದ ಹೊರಗೆ ಓಡಿ ಜೀವ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮದ್ಯಪ್ರಿಯರಿಗೆ ಸಿಹಿಸುದ್ದಿ: ಮದ್ಯರಾತ್ರಿ 1ಗಂಟೆಯ ವರೆಗೆ ಮದ್ಯ ಮಾರಾಟಕ್ಕೆ ಅವಕಾಶ

ಈ ಘಟನೆಯಲ್ಲಿ ಓರ್ವ ಕಣ್ಮರೆಯಾಗಿದ್ದು, ಬೆಳಗಾವಿ ತಾಲೂಕಿನ ಕವಳವಾಡಿ ಗ್ರಾಮದ ಮಾರುತಿ ಕರವೇಕರ (32), ಜುನೇ ಬೆಳಗಾವಿಯ ಯಲ್ಲಪ್ಪ ಸಲವಡೆ (35), ರಾಜವಾಡಿಯ ರಂಜಿತ್ ಪಾಟೀಲ (39), ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು, ಮಾರ್ಕಂಡೇಯ ನಗರದ ಯಲ್ಲಪ್ಪ ಗುಂಡ್ಯಾಗೋಳ (20) ಎಂಬ ಕಾರ್ಮಿಕ ಕಣ್ಮರೆಯಾಗಿದ್ದಾನೆ. ಯಲ್ಲಪ್ಪ‌ ಕಣ್ಮರೆ‌ ಆಗಿರುವ ವಿಚಾರ ತಿಳಿದ ಪೋಷಕರು ಕಾರ್ಖಾನೆಯತ್ತ ದೌಡಾಯಿಸಿ ಕಣ್ಣೀರಿಡುತ್ತಲೇ ನಮ್ಮ ಮಗನನ್ನು ಬದುಕಿಸಿಕೊಡುವಂತೆ ಪೊಲೀಸರಲ್ಲಿ ಅಂಗಲಾಚಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, SDRF ಸಿಬ್ಬಂದಿಗಳು ರಾತ್ರಿಯಿಡಿ ಬೆಂಕಿ ನಂದಿಸುವ ಕಾರ್ಯ ನಡೆಸಿ ಬೆಂಕಿ ನಂದಿಸಿದ್ದಾರೆ.

RELATED ARTICLES

Related Articles

TRENDING ARTICLES