Thursday, December 5, 2024

ನನ್ನ ಮತ್ತು ವಿರಾಟ್​​ ಕೊಹ್ಲಿ ಸಂಬಂಧ ಕೇವಲ ಟಿಆರ್​ಪಿಗಾಗಿ ಅಲ್ಲ : ಗೌತಮ್​ ಗಂಭೀರ್​

ಮುಂಬೈ, ಮಹಾರಾಷ್ಟ್ರ : ನನ್ನ ಮತ್ತು ವಿರಾಟ್​ ಕೊಹ್ಲಿ ಸಂಬಂಧ ಬಗ್ಗೆ ಸಾಕಷ್ಟು ಬಾರಿ ಮಾತಾಡಿದ್ದೇನೆ. ನಮ್ಮಿಬ್ಬರ ಸಂಬಂಧ ಕೇವಲ ಟಿಆರ್​ಪಿಗಾಗಿ ಅಲ್ಲ ಎಂದು ಟೀಂ ಇಂಡಿಯಾ ನೂತನ ಮುಖ್ಯ ಕೋಚ್​​ ಗೌತಮ್​ ಗಂಭೀರ್​ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ನನ್ನ ಮತ್ತು ಕೊಹ್ಲಿ ಸಂಬಂಧ ವೈಯಕ್ತಿಕವಾದದ್ದು. ಟಿಆರ್​ಪಿಗಾಗಿ ಅಲ್ಲ. ಮೈದಾನದಲ್ಲಿ, ಪ್ರತಿಯೊಬ್ಬರು ತಮ್ಮ ಸ್ವಂತ ಜರ್ಸಿಗಾಗಿ ಹೋರಾಡಲು ಮತ್ತು ಗೆಲುವಿನೊಂದಿಗೆ ಡ್ರೆಸ್ಸಿಂಗ್ ಕೊಠಡಿಗೆ ಮರಳುವ ಹಕ್ಕನ್ನು ಪಡೆದಿದ್ದಾರೆ ಎಂದಿದ್ದಾರೆ.

ಗಂಭೀರ್​ ಮತ್ತು ಕೊಹ್ಲಿ ಒಳ್ಳೆಯ ಸ್ನೇಹಿತರಾಗಿರಲಿಲ್ಲ. ಐಪಿಎಲ್​ನಲ್ಲಿ ಇಬ್ಬರು ಮುಖಾಮುಖಿಯಾದಗ ಇದು ಬಹಿರಂಗವಾಗಿದೆ. ಹೀಗಿದ್ದರು ಸಹ ಜುಲೈ 27ರಿಂದ ಆರಂಭವಾಗುವ ಟಿ20 ಮತ್ತು ಏಕದಿನ ಕ್ರಿಕೆಟ್​ಗಾಗಿ ಶ್ರೀಲಂಕಾಕ್ಕೆ ಒಟ್ಟಿಗೆ ಪ್ರವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅದು ಸುಳ್ಳು. ನಾನು ಮತ್ತು ಕೊಹ್ಲಿ ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೇವೆ. ಪ್ರತಿಯೊಬ್ಬರೂ ಅವರ ಆಟವನ್ನು ಆಡುತ್ತಾರೆ. ಈ ಸಮಯದಲ್ಲಿ, ಈ ಸಮಯದಲ್ಲಿ ನಾವು ಭಾರತದ 140 ಕೋಟಿ ಭಾರತೀಯರನ್ನ ಪ್ರತಿನಿಧಿಸುತ್ತಿದ್ದೇವೆ. ಭಾರತ ಹೆಮ್ಮೆಪಡುವ ಕೆಲಸ ಮಾಡುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ಗಂಭೀರ್ ಅವರು ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಅವರು ಹೆಚ್ಚಿನ ಪಂದ್ಯಗಳಿಗೆ ಲಭ್ಯವಿರುತ್ತಾರೆ. ಟಿ20 ಮತ್ತು ಏಕದಿನ ಕ್ರಿಕೆಟ್​​ ವಲ್ಡ್​​ಕಪ್​ನಂತಹ ದೊಡ್ಡ ವೇದಿಕೆಯಲ್ಲಿ ಏನನ್ನು ನೀಡಬಲ್ಲವು ಎಂಬುದನ್ನು ತೋರಿಸಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಇಬ್ಬರು 2027ರ ವಿಶ್ವಕಪ್​ ವರೆಗೆ ತಮ್ಮ ಫಿಟ್​ನೆಸ್​​ ಉಳಿಸಿಕೊಳ್ಳಬಹುದು ಎಂದು ನಂಬಿದ್ದೇನೆ. ಈ ವಿಷಯ ತೀರ ಅವರ ವೈಯಕ್ತಿಕ ವಿಷಯವಾಗಿದೆ.

RELATED ARTICLES

Related Articles

TRENDING ARTICLES