ಕಬಿನಿ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನಲೆ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ. ನಂಜನಗೂಡು ನಂಜುಡೇಶ್ವರನ ದೇವಾಲಯಲಕ್ಕೆ ಜಲದಿಗ್ಭಂದನದವಾವಗಿದ್ದು, ಈ ದೃಶ್ಯ ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಪಿಲಾ ನದಿಯ ಸ್ನಾನ ಘಟ್ಟ, ಪರಶುರಾಮ ದೇವಸ್ಥಾನ, ಅಯ್ಯಾಪ್ಪಸ್ವಾಮಿ ದೇವಸ್ಥಾನ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಯ ಮೇಲೆ ಕಪಿಲಾ ನದಿಯ ನೀರು ಹರಿಯುತ್ತಿದ್ದು, ಮನಮೋಹಕ ದೃಶ್ಯ ಸ್ಥಳೀಯರ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೇಮಾವತಿ ಜಲಾಶಯ ಭರ್ತಿಗೆ 4 ಅಡಿ ಬಾಕಿ:
ಹಾಸನ ಭಾಗದಲ್ಲಿ ಬಾರಿ ಮಳೆ ಹಿನ್ನಲೆ ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಬಾರಿ ಏರಿಕೆಯಾಗಿದೆ. ಒಂದೇ ದಿನಕ್ಕೆ ಜಲಾಶಯಕ್ಕೆ ಮೂರು ಟಿಎಂಸಿ ನೀರು ಹರಿದು ಬಂದಿದೆ. 48 ಗಂಟೆಗಳ ಅಂತರದಲ್ಲಿ ಜಲಾಶಯಕ್ಕೆ 6 ಟಿಎಂಸಿ ನೀರು ಸಂಗ್ರಹವಾಗಿದೆ. ನಿನ್ನೆ 31 ಟಿಎಂಸಿ ನೀರಿದ್ದ ಜಲಾಶಯದಲ್ಲಿ ಇಂದು 34 ಟಿಎಂಸಿ ನೀರು ಸಂಗ್ರಹವಾಗಿದೆ. ಭಾರಿ ಮಳೆಯಿಂದ ಬಹುತೇಕ ಜಲಾಶಯ ಭರ್ತಿಯಾಗಿದೆ. ಹೇಮಾವತಿ ಜಲಾಶಯ ಭರ್ತಿಗೆ ಇನ್ನು ನಾಲ್ಕೇ ಅಡಿ ಬಾಕಿ ಇದ್ದು, ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನೀರನ್ನ ಅಧಿಕಾರಿಗಳು ಹೊರಬಿಟ್ಟದ್ದಾರೆ. ಜಲಾಶಯದ ಆರು ಕ್ರಸ್ಟ್ ಗೇಟ್ ಗಳ ಮೂಲಕ 12079 ಕ್ಯುಸೆಕ್ ನೀರು ಹೊರಕ್ಕೆ ಬಿಡಲಾಗಿದೆ.
ಇದನ್ನೂ ಓದಿ: ಜೈನ ಧರ್ಮದವರ ಕ್ಷಮೆ ಕೇಳಿದ ಹಂಸಲೇಖ
ಶಿವಮೊಗ್ಗದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ:
ಮಲೆನಾಡಿನಲ್ಲಿ ಮುಂಗಾರು ಮಳೆ ಮುಂದುವರೆದಿದೆ. ನದಿಗಳು ತುಂಬಿ ಹರಿಯುತ್ತಿವೆ. ಹಳ್ಳ-ಕೊಳ್ಳಗಳು ತುಂಬಿದ್ದು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇಡೀ ದಿನ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಆರ್ಭಟದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ನಿರಂತರ ಮಳೆ, ಹಳ್ಳ ದಾಟಲು ಹೋಗಿ ಎತ್ತುಗಳು ಸಾವು:
ಶಿವಮೊಗ್ಗದಲ್ಲಿ ಮಳೆ ಮುಂದುವರೆದಿದ್ದು, ನಿರಂತರ ಮಳೆಗೆ ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿದೆ.
ಹಳ್ಳ ದಾಟಲು ಹೋಗಿ ಎತ್ತುಗಳು ಸಾವನಪ್ಪಿರುವ ಘಟನೆ ಅಗ್ರಹಾರ ಮುಚಡಿಯಲ್ಲಿ ನಡೆದಿದೆ. ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಒಂದು ಎತ್ತು ಸೇರಿ ಆಕಳು, ಒಮ್ಮೆ ಸಾವನ್ನಪ್ಪಿವೆ. ಬದುಕಿಗೆ ಆಸರೆಯಾಗಿದ್ದ ಎತ್ತು, ಗೋವು ಕಳೆದುಕೊಂಡ ರೈತ ಕಾಂಗಲಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.