ಮೈಸೂರು: ಆಷಾಢ ಶುಕ್ರವಾರ ವಿಶೇಷ ಪೂಜೆ ಹಿನ್ನೆಲೆ ಶುಕ್ರವಾರ ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ನಿಂತ ಭಕ್ತರು ಆಡಳಿತಾಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಪವರ್ ಟಿವಿಗೆ ‘ಸುಪ್ರೀಂ’ ಪವರ್!
ದೇವಿಯ ದರ್ಶನಕ್ಕೆಂದು ಸರತಿ ಸಾಲಿನಲ್ಲಿ ನಿಂತ ಭಕ್ತರು ಭಕ್ತಾಧಿಗಳಿಗೆ ಸರಿಯಾದ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ಸರತಿ ಸಾಲಿನಲ್ಲಿ ನಿಂತು 5 ಗಂಟೆ ಕಳೆದರೂ ದರ್ಶನ ಸಾಧ್ಯವಾಗಿಲ್ಲ. 300 ರೂಪಾಯಿ ಕೊಟ್ಟು ಬಂದರೂ ಸಂತೋಷವಾಗಿ ದೇವಿ ದರ್ಶನ ಮಾಡಲು ಆಗುತ್ತಿಲ್ಲ. ತುಂಬ ಹೊತ್ತು ಕ್ಯೂನಲ್ಲಿ ನಿಂತರೂ ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ವಯಸ್ಸಾದವರಿಗೆ ತುಂಬಾ ತೊಂದರೆ ಆಗಿದೆ. ವಾಷ್ ರೂಂ ವ್ಯವಸ್ಥೆ ಸಹ ಕಲ್ಪಿಸಿಲ್ಲ ಎಂದು ಭಕ್ತರು, ದೇವಾಲಯದ ಮಂಡಳಿ ವಿರುದ್ದ ಕಿಡಿಕಾರಿದ್ದಾರೆ.
ಆಷಾಡ ಮಾಸದ ಹಿನ್ನೆಲೆ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಲ್ಲಿ ಭಕ್ತರು ಆಗಮಿಸುತ್ತಾರೆ ಈ ಹಿನ್ನೆಲೆ ಮುಂದಿನ ವಾರವಾದರೂ ಸಮಸ್ಯೆ ಬಗೆಹರಿಸುವಂತೆ ಆಡಳಿತ ಮಂಡಳಿಯವರನ್ನು ಒತ್ತಾಯಿಸಿದ್ದಾರೆ.