Friday, July 12, 2024

ಪೊಲೀಸ್​ ಠಾಣೆ ಪಕ್ಕದಲ್ಲೇ ಯುವಕರಿಂದ ವೀಲ್ಹಿಂಗ್​ ಪುಂಡಾಟ

ಬೆಂಗಳೂರು: ಪೊಲೀಸ್​ ಠಾಣೆ ಪಕ್ಕದಲ್ಲೇ ಪುಂಡರು RX​ ಬೈಕ್​ನಲ್ಲಿ ಭರ್ಜರಿ ವೀಲ್ಹಿಂಗ್​ ನಡೆಸಿರುವ ಘಟನೆ ಆನೇಕಲ್​ ತಾಲೂಕಿನ ಸರ್ಕಾಪುರದಲ್ಲಿ ನಡೆದಿದೆ.

ಕಳೆದವಾರ ಹೊಸೂರು ಮುಖ್ಯರಸ್ತೆಯಲ್ಲಿ ಪುಂಡರು ಬೈಕ್​ ವೀಲ್ಹಿಂಗ್ ನಡೆಸಿ ಹೆದ್ದಾರಿಯಲ್ಲಿ ತೆರಳುತ್ತಿದ್ದ ಯುವತಿಗೆ ಯುವಕರು ಕಾಟ ಕೊಟ್ಟ ಬಗ್ಗೆ ಮಾದ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗುತ್ತಿದ್ದಂತೆ ಪೊಲೀಸರು ಪುಂಡರನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ದದ್ದಲ್ ನಿವಾಸಗಳ ಮೇಲೆ ED ದಾಳಿ

ಆದರೇ, ಇದೀಗ ಸರ್ಜಾಪುರ ಪೊಲೀಸ್​ ಠಾಣೆ ಪಕ್ಕದಲ್ಲೇ ಯುವಕರು ವೀಲ್ಹಿಂಗ್ ಮಾಡುವ ಮೂಲಕ ಪುಂಡಾಟ ಮೆರೆದಿದ್ದಾರೆ. ವೀಲ್ಹಿಂಗ್ ಮಾಡುತ್ತಾ ಹೆದ್ದಾರಿಯಲ್ಲಿ ಸಾಗುತ್ತಿರುವ ಬೇರೆ ವಾಹನಗಳಿಗೆ ಫುಲ್​ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಈ ದೃಶ್ಯಗಳು ಪ್ರಯಾಣಿಕರ ಮೊಬೈಲ್​ ನಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES