Friday, July 12, 2024

SSLC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ.31.02 ವಿದ್ಯಾರ್ಥಿಗಳು ತೇರ್ಗಡೆ

ಬೆಂಗಳೂರು: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಫಲಿತಾಂಶ ಇಂದು ಪ್ರಕಟವಾಗಿದ್ದು, 31.02% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶವನ್ನು ಪ್ರಕಟಿಸಿದೆ. ಪರೀಕ್ಷೆ-2 ರಲ್ಲಿ 69,275 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜೂನ್ 14 ರಿಂದ 22ರ ವರೆಗೆ ಪರೀಕ್ಷೆ ನಡೆದಿತ್ತು. 2,23,293 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟು 69,275 ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಅವರ ಪೈಕಿ ಬಾಲಕರು 38,820 ಹಾಗೂ ಬಾಲಕಿಯರು 30,455 ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​ ಭೇಟಿಗೆ ಬಂದ ಅಕ್ಕ, ಭಾವ ಮತ್ತು ಅಳಿಯ
ಫಲಿತಾಂಶವನ್ನು ಮಂಡಳಿಯ ವೆಬ್‌ಸೈಟ್‌ https://karresults.nic.in ನಲ್ಲಿ ವೀಕ್ಷಿಸಬಹುದಾಗಿದೆ.

RELATED ARTICLES

Related Articles

TRENDING ARTICLES