Friday, July 12, 2024

ಸುನೀಲ್​ ಗವಾಸ್ಕರ್​ಗೆ ಇಂದು 75ನೇ ಜನ್ಮದಿನದ ಸಂಭ್ರಮ

ಭಾರತದ ಕ್ರಿಕೆಟ್​ ದಂತಕಥೆ ಸುನಿಲ್​ ಗವಾಸ್ಕರ್​ ಅವರಿಗೆ ಇಂದು ಜನ್ಮದಿನದ ಸಂಭ್ರಮ, ಜುಲೈ 10ರ ಬುಧವಾರ 75ನೇ ವಸಂತಕ್ಕೆ ಕಾಲಿಟ್ಟಿರುವ ಗವಾಸ್ಕರ್​ ಅವರಿಗೆ ಅಭಿಮಾನಿಗಳು ಜನ್ಮದಿನದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ನಿವೃತ್ತಿ ಬಳಿಕವೂ ಈ ಹಿಂದೆ ಅವರು ಬ್ಯಾಂಟಿಂಗ್​ ವೈಖರಿಯಿಂದ ನಿರ್ಮಾಣವಾದ ಹಲವು ದಾಖಲೆಗಳು, ನಾಯಕತ್ವ, ವಿವಾದಗಳು, ಇಂದಿಗೂ ಮುಂದುವರೆದಿದೆ. ಜೊತೆಗೆ ವೀಕ್ಷಕ ವಿವರಣೆಗಾರನಾಗಿ ಸದಾ ಮಿಂಚುತ್ತಲೇ ಇದ್ದಾರೆ. ಆ ಮೂಲಕ ಈ ಕಾಲಘಟ್ಟದ ಎಲ್ಲ ಪೀಳಿಗೆಯ ಕ್ರಿಕೆಟ್ ಅಭಿಮಾನಿಗಳಲ್ಲಿ ‘ಸನ್ನಿ’ ಚಿರಪರಿಚಿತರು ಆಗಿದ್ದಾರೆ.

1970ರ ದಶಕದಲ್ಲಿ ಭಾರತದ ಕ್ರಿಕೆಟ್ ಬೆಳವಣಿಗೆಯ ಹಾದಿಯಲ್ಲಿತ್ತು. ಇ.ಎ.ಎಸ್. ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಬಿಷನ್ ಸಿಂಗ್ ಬೇಡಿ, ಏಕನಾಥ್ ಸೋಲ್ಕರ್, ಅಜಿತ್ ವಾಡೇಕರ್, ಎಸ್. ವೆಂಕಟರಾಘವನ್, ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಹೆಸರುಗಳು ಕ್ರಿಕೆಟ್ ಅಭಿಮಾನಿಗಳಿಗೆ ಚಿರಪರಿಚಿತವಾಗಿದ್ದವು. ಬಾನುಲಿಯ ಕಾಮೆಂಟ್ರಿ ಮತ್ತು ಸುದ್ದಿಪತ್ರಿಕೆಗಳ ಮೂಲಕ ಅವರ ಸಾಧನೆಗಳು ಜನಮಾನಸಕ್ಕೆ ತಲುಪುತ್ತಿದ್ದ ಕಾಲ ಅದು.

ಅದೇ ಕಾಲಘಟ್ಟದಲ್ಲಿ ಮುಂಬೈನ ಮಧ್ಯಮವರ್ಗದ, ಮರಾಠಿಭಾಷಿಕ ಕುಟುಂಬದ ಹುಡುಗ ಸನ್ನಿ, ಕ್ರಿಕೆಟ್ ಅಂಗಳಕ್ಕೆ ಇಳಿಯುತ್ತಾರೆ. ಆದರೆ ಗಂಭೀರವಾಗಿ ಆಟವನ್ನು ಅಪ್ಪಿಕೊಂಡಿದ್ದು ತಮ್ಮ ಸೋದರಮಾವ ಮಾಧವ ಮಂತ್ರಿ ಅವರು ಹೇಳಿದ್ದ ಒಂದು ಮಾತಿನಿಂದ ಎಂದು ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಗಾವಸ್ಕರ್ ನೆನಪಿಸಿಕೊಂಡಿದ್ದರು.

ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಜೆಡಿಎಸ್​ ವಿರೋಧ: ಶಾಸಕ ಇಕ್ಬಾಲ್ ಹುಸೇನ್​ ಪ್ರತಿಕ್ರಿಯೆ

ಕ್ರಿಕೆಟ್‌ಗೆ ಸಂಬಂಧಿಸಿದಂತೆ ನಾನು ಮೊದಲ ಪಾಠ ಕಲಿತದ್ದು ನನ್ನ ಸೋದರಮಾವ ಮಾಧವ ಮಂತ್ರಿ (ಭಾರತದ ಮಾಜಿ ಕ್ರಿಕೆಟಿಗ) ಅವರಿಂದ, ಚಿಕ್ಕವನಿದ್ದಾಗ ಅಮ್ಮನೊಂದಿಗೆ ಅವರ (ಮಾವ) ಮನೆಗೆ ಹೋಗಿದ್ದೆ. ಅಲ್ಲಿ ಅವರ ಕ್ರಿಕೆಟ್ ಕ್ಯಾಪ್‌ಗಳು, ಜೆರ್ಸಿಗಳು, ಬ್ಲೇಜರ್‌ಗಳು ಮತ್ತು ಕ್ರಿಕೆಟ್ ಸಲಕರಣೆಗಳು ಇದ್ದವು. ಅದರಲ್ಲಿ ಒಂದು ಕ್ಯಾಪ್ ಹಾಕಿಕೊಳ್ಳಲು ಮುಂದಾದೆ. ಆಗ ಅದನ್ನು ಮುಟ್ಟದಂತೆ ಅವರು ತಾಕೀತು ಮಾಡಿದರು. ‘ನಿಮ್ಮ ಬಳಿ ಇಷ್ಟೊಂದು ಇವೆಯಲ್ಲ..’ ಎಂದೆ. ಅದಕ್ಕವರು, ಅವೆಲ್ಲವನ್ನೂ ತಾವು ಗಳಿಸಿದ್ದು. ಅಂತಹದೊಂದು ಬೇಕೆಂದರೆ ನೀನೇ ಗಳಿಸಿಕೊಳ್ಳಬೇಕು ಎಂದಿದ್ದರು. ಆ ಮಾತು ನನ್ನ ಮನದಲ್ಲಿ ಅಚೊತ್ತಿತ್ತು’ ಎಂದು ಗಾವಸ್ಕ‌ರ್ ಹೇಳಿದ್ದರು.
ಇದಾದ ನಂತರ ಮುಂಬೈ ತಂಡ, ಭಾರತ ತಂಡದ ಕ್ಯಾಪ್‌ಗಳನ್ನು ಗಳಿಸಿದರು. ಆರಂಭಿಕ ಬ್ಯಾಟರ್ ಆಗಿ ಹಲವು ದಾಖಲೆಗಳನ್ನು ಬರೆದರು.

ತಮ್ಮ ಆಟ ಮತ್ತು ಸಂವಹನ ಶಕ್ತಿಯ ಮೂಲಕ ಬಹುಬೇಗ ತಂಡದಲ್ಲಿ ವ್ಯಕ್ತಿತ್ವ ಬೆಳೆಸಿಕೊಂಡರು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವು ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮೊದಲ ಬಾರಿ ಸರಣಿಗಳನ್ನು ಜಯಿಸಿದಾಗ ತಂಡದ ಭಾಗವಾಗಿದ್ದವರು. 1983 ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಕಪಿಲ್‌ದೇವ್ ನಾಯಕತ್ವದ ತಂಡದ ಆರಂಭಿಕ ಬ್ಯಾಟ‌ರ್ ಆಗಿದ್ದವರು.

ಕಾಮೆಂಟ್ರಿ ಚಾಂಪಿಯನ್: ಆಟದಿಂದ ನಿವೃತ್ತರಾದ ನಂತರ ಇವರ ಸಮಕಾಲೀನರಲ್ಲಿ ಹಲವರು ನೇಪಥ್ಯಕ್ಕೆ ಸರಿದಿದ್ದೇ ಹೆಚ್ಚು. ಆದರೆ ಸನ್ನಿ ಕ್ರಿಕೆಟ್‌ನೊಂದಿಗಿನ ನಂಟು ಇಂದಿಗೂ ಉಳಿದಿದೆ. ವೀಕ್ಷಕ ವಿವರಣೆಗಾರರಾಗಿ ಮೂರು ದಶಕಗಳಿಂದ ಟೆಲಿವಿಷನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

RELATED ARTICLES

Related Articles

TRENDING ARTICLES