Friday, July 12, 2024

ಮುಡಾ ಹಗರಣ ಮುಚ್ಚಿ ಹಾಕಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್​​

ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಭಾಗಿಯಾಗಿದೆ ಎಂಬ ಆರೋಪ ವಿಚಾರ ಕುರಿತು ಕಾಂಗ್ರೆಸ್​​​​​​ ವಿಧಾನಪರಿಷತ್​ ಸದಸ್ಯ ಬಿ.ಕೆ.ಹರಿಪ್ರಸಾದ್​​​​ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು ಸಿಎಂ, ಡಿಸಿಎಂ ಬಹಳ ದೊಡ್ಡ ನಾಯಕರು, ಅವರಿಗೆಲ್ಲ ನಾವು ಸಲಹೆ ನೀಡಲು ಆಗತ್ತದೆಯೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಡೆಂಗ್ಯು ತಡೆ: ಟಾಸ್ಕ್ ಫೋರ್ಸ್ ರಚನೆಗೆ ಸಿಎಂ ಸೂಚನೆ

ಮುಡಾ ಹಗರಣ, ವಾಲ್ಮೀಕಿ ಹಗರಣದಲ್ಲಿ ದನಿ ಎತ್ತಬೇಕು. ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮೆಲ್ಲರ ನಾಯಕ ರಾಹುಲ್ ಗಾಂಧಿ ಝೀರೋ ಟಾಲರೆನ್ಸ್ ಅಂತ ಹೇಳಿದ್ದಾರೆ. ಅದು ಯಾರೇ ಎಷ್ಟೇ ದೊಡ್ಡವರಿದ್ದರೂ ಸಹ ಕ್ರಮ ಆಗಬೇಕು ಎಂದು ಮಾರ್ವಿಕವಾಗಿ ಹೇಳಿದ್ದಾರೆ.

ಭೂಮಿ ವಿಚಾರದಲ್ಲಿ ಮಾತಾನಾಡುವುದಕ್ಕೆ ಹೋದರೆ ಫಂಡಾರಸ್​​ ಬಾಕ್ಸ್ ಇದ್ದ ಹಾಗೆ. ಯಾರೂ ಸಹ ಅದರಿಂದ ಹೊರಗೆ ಇಲ್ಲ. ಬಹುತೇಕ ರಾಜಕಾರಣಿಗಳು ಭೂಮಿ ವಿಚಾರದಿಂದ ಹೊರಗಿಲ್ಲ. ಒಂದಲ್ಲ ಒಂದು ರೀತಿ ಅದರೊಳಗೇ ಇದ್ದೇ ಇರುತ್ತಾರೆ. ಅಷ್ಟು ಸುಲಭವಾಗಿ ಮುಡಾ ಅಂತ ಅದನ್ನು ಮುಚ್ಚಿ ಹಾಕಲು ಆಗುವುದಿಲ್ಲ ಎಂದರು.

ಮೈಸೂರು ಮಾತ್ರವಲ್ಲ, ಬೆಂಗಳೂರಿನಲ್ಲಿ ಎಷ್ಟೆಲ್ಲ ಡಿನೋಟಿಫೈ ಆಗಿದೆ ನೋಡಿ. ಯಾರ ಯಾರ ಕಾಲದಲ್ಲಿ ಎಷ್ಟೆಲ್ಲ ಡಿನೋಟಿಪೈ ಆಗಿದೆ ಎಂಬುದನ್ನು ಗಮನಿಸಿ. ದೊಡ್ಡವರಿಗೆ ಒಂದು ಕಾನೂನು, ಬಡವರಿಗೆ ಇನ್ನೊಂದು ಕಾನೂನು ಇರಬಾರದು. ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES