ಬೆಂಗಳೂರು ಗ್ರಾಮಾಂತರದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ ವೇಳೆ ಕರಡಿಯೊಂದು ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಘಟನೆ ನಡೆದಿದೆ. ಬೆಟ್ಟಪ್ಪ (54) ಕರಡಿ ದಾಳಿಗೊಳಗಾದವರು.
ಇದನ್ನು ಓದಿ; ಬಾವಿಗೆ ಎಸೆದು 2 ತಿಂಗಳ ಹಸುಗೂಸು ಕೊಲೆ
ಬೆಟ್ಟಪ್ಪ ಕಳೆದ ಇಪ್ಪತ್ತು ವರ್ಷಗಳಿಂದ ಬನ್ನೇರುಘಟ್ಟದಲ್ಲಿ ಸಫಾರಿಯ ಗೇಟ್ ಆಪರೇಟರ್ ಕೆಲಸ ಮಾಡುತ್ತಿದ್ದಾರೆ. ಇಂದು ಸಫಾರಿಯಲ್ಲಿ ಗೇಟ್ ಆಪರೇಟ್ ಮಾಡುವಾಗ ಏಕಾಏಕಿ ಕರಡಿ ದಾಳಿ ಮಾಡಿದೆ. ಬೆಟ್ಟಪ್ಪ ಗಂಭೀರ ಗಾಯಗೊಂಡಿದ್ದು. ಅಪೋಲೋ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಾವು ಬದುಕಿನ ನಡುವೆ ಬೆಟ್ಟಪ್ಪ ಹೋರಾಟ ನಡೆಸುತ್ತಿದ್ದಾರೆ.