Friday, September 20, 2024

ಪಾಕಿಸ್ತಾನದಲ್ಲಿ ಪೆಟ್ರೋಲ್‌ಗಿಂತ ದುಬಾರಿಯಾದ ಹಾಲು, ಲೀಟರ್‌ಗೆ 370 ರೂ..!

ಪಾಕಿಸ್ತಾನ: ಪಾಕಿಸ್ತಾನದ ಪರಿಸ್ಥಿತಿ ಬಿಡಿಸಿ ಹೇಳಬೇಕಿಲ್ಲ. ಕಳೆದ ಒಂದು ವರ್ಷದಿಂದ ಪಾಕಿಸ್ತಾನ ಆರ್ಥಿಕವಾಗಿ ಜರ್ಝರಿತವಾಗಿದೆ. ಖಜಾನೆ ಖಾಲಿ ಖಾಲಿ, ವಿದೇಶಿದಲ್ಲಿ ಸಾಲದ ಶೂಲ, ಉತ್ಪಾದನೆ, ರಫ್ತು ಪಾತಾಳಕ್ಕೆ, ಆಮದು ಏರಿಕೆ. ಹಳಿ ತಪ್ಪಿರುವ ಪಾಕಿಸ್ತಾನದಲ್ಲಿ ಇದೀಗ ತೆರಿಗೆ ಹೆಚ್ಚಳ ಮಾಡಲಾಗಿದೆ. ಇದರ ಪರಿಣಾಮ ಒಂದು ಲೀಟರ್ ಹಾಲಿನ ಬೆಲೆ 370 ರೂಪಾಯಿಗೆ ಏರಿಕೆಯಾಗಿದೆ. ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಮಂದುವರಿದ ದೇಶಗಳಿಗಿಂತ ಪಾಕಿಸ್ತಾನದಲ್ಲಿ ಹಾಲಿನ ದರ ದುಬಾರಿಯಾಗಿದೆ.

ಇದನ್ನ ಓದಿ; ಡೆಂಘೀ ಹೆಚ್ಚಳ; ಸ್ವಚ್ಛತೆ ನಿರ್ಲಕ್ಷ್ಯವಹಿಸಿದ್ರೆ BBMPಯಿಂದ ಫೈನ್​​​

ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 277 ರೂಪಾಯಿ ಪ್ರತಿ ಲೀಟರ್‌ಗೆ ಆದರೆ ಹಾಲಿನ ಬೆಲೆ 1.33 ಅಮೆರಿಕನ್ ಡಾಲರ್. ಪ್ಯಾರಿಸ್‌ನಲ್ಲಿ ಒಂದು ಲೀಟರ್ ಹಾಲಿನ ಬೆಲೆ 1.23 ಅಮೆರಿಕನ್ ಡಾಲರ್, ಆಸ್ಟ್ರೇಲಿಯಾ ಮೆಲ್ಬೋರ್ನ್‌ನಲ್ಲಿ 1.08 ಅಮೆರಿಕನ್ ಡಾಲರ್. ಕಳೆದ ವಾರ ಪಾಕಿಸ್ತಾನದಲ್ಲಿ ಹಾಲಿನ ಮೇಲೆ ಶೇಕಡಾ 18ರಷ್ಟು ತೆರಿಗೆ ಏರಿಕೆ ಮಾಡಲಾಗಿದೆ. ಪಾಕಿಸ್ತಾನ ಹಣಕಾಸು ಸಚಿವ ಮೊಹಮ್ಮದ್ ಔರಂಗಜೇಬ್ ಈ ಘೋಷಣೆ ಮಾಡಿದ್ದರು. ಇತ್ತ ಸಗಟು ಮಾರಕಟ್ಟೆ ದರ ಕೂಡ ಹೆಚ್ಚಳವಾಗಿದೆ. ಹೀಗಾಗಿ ಸರಿಸುಮಾರು ಶೇಕಡಾ 25 ರಷ್ಟು ದರದಲ್ಲಿ ಏರಿಕೆಯಾಗಿದೆ. ಇದರ ಪರಿಣಾಮ ಹಾಲು 370 ರೂಪಾಯಿಗೆ ತಲುಪಿದೆ.

ತೆರಿಗೆ ಹೆಚ್ಚಳದಿಂದ ಹಾಲು ದುಬಾರಿಯಾಗಿದೆ. ಇದರ ಪರಿಣಾಮ ಹಣದುಬ್ಬರ ಪಾಕಿಸ್ತಾನದಲ್ಲಿ ತಾಂಡವವಾಡುತ್ತಿದೆ. ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶೇಕಡಾ 40 ರಷ್ಚು ಪಾಕಿಸ್ತಾನದ ಜನ ಕಡು ಬಡನತಕ್ಕೆ ತಳ್ಳಲ್ಪಟ್ಟಿದ್ದಾರೆ. ಪಾಕಿಸ್ತಾನದಲ್ಲೇ 5 ವರ್ಷ ಕೆಳಗಿನ ಶೇಕಡಾ 60 ರಷ್ಟು ಮಕ್ಕಳು ಅನೆಮಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಶೇಕಡಾ 40 ರಷ್ಟು ಮಕ್ಕಳು ಅಪೌಷ್ಠಿಕತೆ ಸೇರಿದಂತೆ ಇತರ ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಹಾಲಿನ ದರವೂ ಏರಿಕೆಯಾಗಿರುವುದರಿಂದ ಪಾಕಿಸ್ತಾನ ಪರಿಸ್ಥಿತಿ ಸಾವು ಬದುಕಿನ ನಡುವಿದೆ..

RELATED ARTICLES

Related Articles

TRENDING ARTICLES