ಬೆಂಗಳೂರು ಗ್ರಾಮಾಂತರ: ಶೌಚಾಲಯ ಕಟ್ಟಡ ಕೆಲಸ ಮಾಡುವಾಗ ಕರೆಂಟ್ ಶಾಕ್‌ನಿಂದ ಯುವಕನೊರ್ವ ಮೃತಪಟ್ಟಿದ್ದಾನೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಯರ್ತಿಗಾನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ವಿಜಯಪುರ ಮೂಲದ ಶ್ರೇಯಸ್ ಮೃತ ದುರ್ದೈವಿ.
ನಿನ್ನೆ ರಾತ್ರಿ ಶೌಚಾಲಯ ಕಟ್ಟಡ ಕೆಲಸ ಮಾಡಲು ಹೋಗಿದ್ದ ಶ್ರೇಯಸ್‌ಗೆ, ಮನೆ ಮುಂದಿದ್ದ ವಿದ್ಯುತ್ ಲೈನ್ ತಾಗಿದೆ. ಈ ವೇಳೆ ಕರೆಂಟ್ ಶಾಕ್‌ನಿಂದಾಗಿ ಶ್ರೇಯಸ್ ಕುಸಿದು ಬಿದ್ದಿದ್ದಾನೆ. ಘಟನೆ ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆದರೆ ಚಿಕಿತ್ಸೆ ಫಲಿಸದೇ ಶ್ರೇಯಾಸ್ ಮೃತಪಟ್ಟಿದ್ದಾರೆ.
ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ವಿದ್ಯುತ್ ಅವಘಡದಲ್ಲಿ ಯುವಕ ಮೃತಪಟ್ಟ ಸುದ್ದಿ ಕೇಳಿ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಿನ್ನೆ ಸಂಜೆ ಕೆಲಸಕ್ಕೆಂದು ಶ್ರೇಯಾಸ್‌ನನ್ನು ಕರೆದುಕೊಂಡು ಹೋಗಿದ್ದರು. ಮಹಡಿ ಮೇಲೆ ವಿದ್ಯುತ್ ವೈರ್ ಎಲ್ಲ ಡಿಸ್ಕನೆಕ್ಟ್ ಆಗಿದ್ದರಿಂದ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಯುವ ಪ್ರೇಮಿಗಳ ಲವ್ವಿಡವ್ವಿ
ನಮಗೆ ನಿನ್ನೆ ಸಂಜೆ 7:30ಕ್ಕೆ ಶ್ರೇಯಾಸ್‌ಗೆ ಕರೆಂಟ್ ಶಾಕ್ ಹೊಡೆದಿದೆ ಎಂದು ತಿಳಿಯಿತು. ಅವಘಡ ನಡೆದಾಗಲೇ ಬೇಗ ಆಸ್ಪತ್ರೆಗೆ ದಾಖಲಿಸಿದ್ದರೆ ಜೀವ ಉಳಿಯುತ್ತಿತ್ತು, ಆದರೆ ಯಾರೊಬ್ಬರು ಕಾಳಜಿ ತೋರದೆ ನಿರ್ಲಕ್ಷ್ಯವಹಿಸಿದ್ದಾರೆ. ಆಸ್ಪತ್ರೆಗೆ ಬಂದಾಗ ಪಲ್ಸ್ ರೇಟ್ ಕಡಿಮೆ ಆಗಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆತಿಲ್ಲ ಎಂದು ಕುಟುಂಬಸ್ಥರು ಅಳಲು ತೊಡಿಕೊಂಡರು.
ಕೆಂಪೇಗೌಡ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.