ಕೊಡಗು: ಮನೆ ಮುಂದೆ ನಿಲ್ಲಿಸಿದ್ದ ಆಟೋವನ್ನ ಕಾಡನೆ ದಾಳಿ ನಡೆಸಿ ಹಾನಿ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಮೂರ್ನಾಡು ಸಮೀಪದ ನಾಲಡಿ ವಾಟೆಕಾಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೇವಯ್ಯನವರ ಮನೆ ಹತ್ತಿರ ರಾತ್ರಿ ನಿಲ್ಲಿಸಿದ್ದ ಆಟೊ ಮೇಲೆ ಆನೆ ದಾಳಿ ಮಾಡಿದ್ದು, ಆಟೋ ಸಂಪೂರ್ಣ ಜಖಂ ಆಗಿದೆ. ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದು ಕಾಡಾನೆ ಈ ದಾಂದಲೆ ಮಾಡಿದೆ.
ಇದನ್ನೂ ಓದಿ: ಮದುವೆ ಮನೆಯಲ್ಲಿ ಕೋತಿ ಕಿರಿಕ್: 8 ಮಂದಿಗೆ ಕಚ್ಚಿದ ಮಂಗ
ಇನ್ನು ಕಾಡಿನಿಂದ ನಾಡಿಗೆ ಬಂದ ಆನೆ ಕಂಡು ಜನರು ಭಯಭೀತರಾಗಿದ್ದಾರೆ. ಕೂಡಲೇ ಆನೆಯನ್ನ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸದ್ಯ ಅರಣ್ಯ ಅಧಿಕಾರಿಗಳು ಭೇಟಿ ಕೊಟ್ಟು ಆನೆ ಕಾಡಿಗಟ್ಟುವ ಕಾರ್ಯಚರಣೆಯನ್ನ ಮುಂದುವರೆಸಿದ್ದಾರೆ.