Tuesday, September 17, 2024

ಗೃಹಪ್ರವೇಶದ ಊಟ ಸೇವಿಸಿ ಓರ್ವ ವೃದ್ದೆ ಸಾವು, ಹಲವರು ಅಸ್ವಸ್ಥ

ಮೈಸೂರು: ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ವೃದ್ದೆಯೋರ್ವರು ಕಾರ್ಯಕ್ರಮದ ಊಟ ಸೇವಿಸಿ ಮಸಣಕ್ಕೆ ಸೇರಿರುವ ಘಟನೆ ಮೈಸೂರಿನ ಮಾರ್ಬಳ್ಳಿಯಲ್ಲಿ ನಡೆದಿದೆ.

ಶಿವಮ್ಮ (65) ಮೃತ ದುರ್ದೈವೆ, ಮೈಸೂರು ತಾಲ್ಲೂಕು ಮಾರ್ಬಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆಯ ಗೃಹಪ್ರವೇಶ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಈ ಕಾರ್ಯಕ್ರಮಕ್ಕೆ ಹಲವು ಗ್ರಾಮಸ್ಥರು ಆಗಮಿಸಿದ್ದರು. ಗೃಹಪ್ರವೇಶ ಪೂಜೆಯ ಬಳಿಕ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಊಟ ಸೇವನೆ ಮಾಡಿದ ಬಳಿಕ 20ಕ್ಕೂ ಅಧಿಕ ಮಂದಿಗೆ ವಾಂತಿ, ಬೇದಿ ಶುರುವಾಗಿದೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು.

ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಟಗರು ಕಾಳಗ: 30ಕ್ಕೂ ಹೆಚ್ಚು ಟಗರು ವಶಕ್ಕೆ

ಕೂಡಲೇ ಅಸ್ವಸ್ಥರಾದವರನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇನ್ನು ಕೆಲವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ಪೈಕಿ ಓರ್ವ ವೃದ್ದೆ ಚಿಕಿತ್ಸೆ ಫಲಕಾರಿಯಾಗೆ ಇಂದು ಬೆಳಗ್ಗೆ ಸಾವಿಗೀಡಾಗಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ  ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ದುರ್ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

RELATED ARTICLES

Related Articles

TRENDING ARTICLES