Tuesday, July 2, 2024

RCB ಆರ್ಭಟಕ್ಕೆ CSK ಬರ್ನ್ : ಬೃಹತ್ ಮೊತ್ತ ದಾಖಲಿಸಿದ RCB, ಆರ್​ಸಿಬಿ ಗೆಲ್ಲುತ್ತಾ? ಕಾಮೆಂಟ್ ಮಾಡಿ

ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೃಹತ್ ಮೊತ್ ದಾಖಲಿಸಿತು. RCB ಬ್ಯಾಟರ್​ಗಳ ಆರ್ಭಟಕ್ಕೆ ಚೆನ್ನೈ ಬೌಲರ್​ಗಳು ಬರ್ನ್ ಆದರು.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್​ ಸಿಡಿಸಿತು.

ಇನ್ನಿಂಗ್ಸ್​ ಆರಂಭಿಸಿದ ಆರ್​ಸಿಬಿಗೆ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಅಧ್ಬುತ ಆರಂಭ ನೀಡಿದರು. ವಿರಾಟ್ ಕೊಹ್ಲಿ 47 ರನ್​ ಗಳಿಸಿ 3 ರನ್​ನಿಂದ ಅರ್ಧಶತಕ ವಂಚಿತರಾದರು. ಫಾಫ್ ಡು ಪ್ಲೆಸಿಸ್ 54 ರನ್​ ಸಿಡಿಸಿ ಔಟಾದರು.

ಬಳಿಕ ಬಂದ ರಜತ್ ಪಾಟೀದಾರ್ ಚೆನ್ನೈ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. 23 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಬೌಂಡರಿಗಳೊಂದಿಗೆ 41 ರನ್​ ಚಚ್ಚಿ, ಔಟಾದರು. ಕ್ಯಾಮೆರಾನ್ ಗ್ರೀನ್​ ಅಜೇಯ 38, ಮ್ಯಾಕ್ಸ್​ವೆಲ್ 16 ಹಾಗೂ ದಿನೇಶ್ ಕಾರ್ತಿಕ್ 14 ರನ್​ ಗಳಿಸಿದರು.

ಚೆನ್ನೈ ಪರ ಶಾರ್ದೂಲ್ ಠಾಕೂರ್ 2, ತುಷಾರ್ ದೇಶಪಾಂಡೆ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ 1 ವಿಕೆಟ್ ಪಡೆದರು. ಚೆನ್ನೈ ಗೆಲ್ಲಲು 219 ರನ್​ ಗಳಿಸಬೇಕಿದೆ. ಉಭಯ ತಂಡಗಳಿಗೂ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದೆ. ಇಂದು ಆರ್​ಸಿಬಿ ಗೆದ್ದರೆ ಪ್ಲೇಆಫ್​ಗೆ ಅರ್ಹತೆ ಪಡೆಯಲಿದೆ.

RELATED ARTICLES

Related Articles

TRENDING ARTICLES