Saturday, September 28, 2024

ಅತ್ಯಾಚಾರ ಪ್ರಕರಣ : ದೇವರಾಜೇಗೌಡ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡರನ್ನು ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

ಜಾಮೀನು ಕೋರಿ ಹೊಳೆನರಸೀಪುರ JMFC ನ್ಯಾಯಾಲಯಕ್ಕೆ ದೇವರಾಜೇಗೌಡ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು, 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

2 ದಿನಗಳ ಹಿಂದಷ್ಟೇ ಹೊಳೆನರಸೀಪುರ ಪೊಲೀಸರು ದೇವರಾಜೇಗೌಡರನ್ನು ಬಂಧಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಇಂದು ತೆರೆದ ಕೋರ್ಟ್​​ನಲ್ಲಿ ಕಸ್ಟಡಿಗೆ ಕೇಳಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ನ್ಯಾಯಾಧೀಶರು, ಮೂರು ದಿನ ಹೊಳೆನರಸೀಪುರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ನಾಳೆ ಬೆಳಗ್ಗೆ 9ಕ್ಕೆ ಜಿಲ್ಲಾ ಕಾರಾಗೃಹದಿಂದ ಪೊಲೀಸರು ಕಸ್ಟಡಿಗೆ ಪಡೆಯಲಿದ್ದಾರೆ.

ಮೇ10ರಂದು ದೇವರಾಜೇಗೌಡ ಅರೆಸ್ಟ್

ಬಿಜೆಪಿ ಮುಖಂಡ ದೇವರಾಜೇಗೌಡನ ಬಂಡವಾಳವನ್ನು ಪವರ್ ಟಿವಿ ಬಿಚ್ಚಿಟ್ಟಿತ್ತು. ಪವರ್​ ಟಿವಿಯೊಂದಿಗೆ ಸಂತ್ರಸ್ತೆ ದೇವರಾಜೇಗೌಡನ ವಿರುದ್ಧ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿತ್ತು. ಮೇ10 ಚಿತ್ರದುರ್ಗದ ಹಿರಿಯೂರು ಬಳಿ ದೇವರಾಜೇಗೌಡರನ್ನ ಪೊಲೀಸರು ವಶಕ್ಕೆ ಪಡೆದಿದ್ದರು.

ಮತ್ತೆ ಪೊಲೀಸ್​ ಕಸ್ಟಡಿಗೆ ದೇವರಾಜೇಗೌಡ

ಬಳಿಕ ಪೊಲೀಸರ ವಶದಲ್ಲಿದ್ದ ದೇವರಾಜೇಗೌಡರನ್ನು ಹೊಳೆನರಸೀಪುರದ ಜಡ್ಜ್ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. ಈ ವೇಳೆ ಪ್ರಿನ್ಸಿಪಲ್‌ ಸಿ.ಜೆ‌, ಜೆಎಂಎಫ್‌ಸಿ ಜಡ್ಜ್​ ಸಿದ್ದರಾಮ. ಎಸ್‌ ಅವರು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದರು. ಇದೀಗ ಮತ್ತೆ ದೇವರಾಜೇಗೌಡರನ್ನು ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

RELATED ARTICLES

Related Articles

TRENDING ARTICLES