Saturday, May 4, 2024

ಲೋಕಸಭಾ ಚುನಾವಣೆ ಹಿನ್ನೆಲೆ ಏ.26ರಂದು ನಮ್ಮ ಮೆಟ್ರೋ ಸೇವೆ ವಿಸ್ತರಣೆ: ಮಾಹಿತಿ ಇಲ್ಲಿದೆ

ಬೆಂಗಳೂರು : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಏ.26ರಂದು (ನಾಳೆ) ಮೆಟ್ರೋ ಸೇವೆ ಸಮಯ ವಿಸ್ತರಣೆ ಮಾಡಲಾಗಿದೆ ಎಂದು BMRCL ತಿಳಿಸಿದೆ.

ನಗರದ ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ, ವೈಟ್ ಫೀಲ್ಡ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11.55 ರವರೆಗೆ ವಿಸ್ತರಿಸಲಾಗಿದೆ. ಇತ್ತ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ನಾಳೆ ಮಧ್ಯರಾತ್ರಿ 12.35ಕ್ಕೆ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್​ನಿಂದ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ಹೊರಡಲಿದೆ. ನಾಳೆ ಲೋಕಸಭಾ ಚುನಾವಣೆ ಮತದಾನ ಇರುವ ಹಿನ್ನಲೆ ಮಧ್ಯರಾತ್ರಿವರೆಗೆ ಸಂಚಾರ ಅವಧಿಯನ್ನು ವಿಸ್ತರಿಸಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಏ.26 ರಂದು ಮೊದಲ ಹಂತದ ಚುನಾವಣೆ: ಪ್ರವಾಸಿ ತಾಣಗಳು ಬಂದ್

14 ಕ್ಷೇತ್ರಗಳಿಗೆ ಮೊದಲ ಹಂತದ ಲೋಕಸಭಾ ಚುನಾವಣೆ :

ಈ ಬಾರಿ ಲೋಕಸಭಾ ಚುನಾವಣೆಯೂ 8 ಹಂತಗಳಲ್ಲಿ ನಡೆಯುತ್ತಿದ್ದು ಕರ್ನಾಟಕದಲ್ಲಿ (ನಾಳೆ) ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ನಡೆಯಲಿದೆ. ರಾಜ್ಯದಲ್ಲಿ 28 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಈಗಾಗಲೇ ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಕೇಂದ್ರದಿಂದ ಸ್ಟಾರ್​ ಪ್ರಚಾರಕರನ್ನು ಕರೆಸಿ ರೋಡ್ ಶೋ, ಸಭೆಗಳನ್ನು ನಡೆಸಿದ್ದಾರೆ, ಏ.24 ರಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು ಇನ್ನು ಮನೆ ಮನೆಗೆ ತೆರಳಿ ಮುಖಂಡರು ಹಾಗು ಕಾರ್ಯಕರ್ತರು ಮತಯಾಚನೆ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES