Sunday, October 6, 2024

ಸತ್ತ ಮೇಲೂ ಕಾಂಗ್ರೆಸ್ ನಿಮ್ಮನ್ನ ಲೂಟಿ ಮಾಡುತ್ತೆ : ಪ್ರಧಾನಿ ಮೋದಿ

ಬೆಂಗಳೂರು : ಆಸ್ತಿ ಹಂಚಿಕೆ ಕುರಿತ ಸ್ಯಾಮ್‌ ಪಿತ್ರೋಡಾ ನೀಡಿದ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಮೋದಿ, ಬದುಕಿದ್ದಾಗ ಮಾತ್ರವಲ್ಲ, ಸತ್ತ ಮೇಲೂ ಕಾಂಗ್ರೆಸ್‌ ನಿಮ್ಮನ್ನ ಲೂಟಿ ಮಾಡುತ್ತದೆ. ಕಾಂಗ್ರೆಸ್‌ನ ಈ ಉದ್ದೇಶ ಒಳ್ಳೆಯದಲ್ಲ. ಈಗ ಅವರ ಅಪಾಯಕಾರಿ ಉದ್ದೇಶಗಳು ಬಹಿರಂಗಗೊಂಡಿವೆ. ನಿಮ್ಮ ಸಂಪಾದನೆ, ನಿಮ್ಮ ಮನೆ, ಅಂಗಡಿ, ಹೊಲದ ಮೇಲೆ ಕಣ್ಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್​ ಶಾ ಸಹ ಸ್ಯಾಮ್ ಪಿತ್ರೋಡಾ ಪಿತ್ರಾರ್ಜಿತ ಹೇಳಿಕೆಗೆ ಕಿಡಿಕಾರಿದ್ದಾರೆ. ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಸಮೀಕ್ಷೆ ಎಂದು ಉಲ್ಲೇಖಿಸಲಾಗಿತ್ತು. ಈ ವಿಷಯವನ್ನು ಪ್ರಸ್ತಾಪಿಸಿದಾಗ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇಡೀ ಕಾಂಗ್ರೆಸ್ ಪಕ್ಷವು ಎಂದಿಗೂ ತಮ್ಮ ಉದ್ದೇಶವಲ್ಲ ಎಂದು ಬೆನ್ನೆಲುಬಾಗಿ ನಿಂತಿದೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್‌ನ ಉದ್ದೇಶ ಸ್ಪಷ್ಟವಾಗಿದೆ

ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯು ದೇಶದ ಜನರ ಖಾಸಗಿ ಆಸ್ತಿಯನ್ನು ಸರ್ಕಾರಕ್ಕೆ ಹಾಕಲು ಕಾಂಗ್ರೆಸ್‌ನ ಉದ್ದೇಶವನ್ನು ಸ್ಪಷ್ಟಪಡಿಸಿದೆ. ಜನರು ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರ ಉದ್ದೇಶ ಈಗ ಬಹಿರಂಗವಾಗಿದೆ, ಅದರ ಅರಿವು ಜನರು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಧರ್ಮಾಧಾರಿತ ಕೋಟಾ ಜಾರಿಗೆ ಪ್ರಯತ್ನ

ಇನ್ನು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಧರ್ಮಾಧಾರಿತ ಕೋಟಾವನ್ನು ಜಾರಿಗೆ ತರುವ ಹಿಂಬಾಗಿಲಿನ ಪ್ರಯತ್ನಗಳನ್ನು ಕಾಂಗ್ರೆಸ್ ಪ್ರಣಾಳಿಕೆ ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES