Wednesday, May 22, 2024

Jr NTR ಜೊತೆ ಆರಾಧನಾ, ಕಾಟೇರ ಕ್ವೀನ್ ಸೆಕೆಂಡ್ ಪ್ರಾಜೆಕ್ಟ್​ಗೆ ಶ್..! ಎಂದ ಮಾಲಾಶ್ರೀ

ಬೆಂಗಳೂರು : ಕನಸಿನ ರಾಣಿ ಮಾಲಾಶ್ರೀ ಮತ್ತೆ ಭರ್ಜರಿ ಕಂಬ್ಯಾಕ್ ಮಾಡಿ, ತೆರೆಮೇಲೆ ಮೋಡಿ ಮಾಡುತ್ತಿದ್ದಾರೆ. ‘ಮಾರಕಾಸ್ತ್ರ’ ರೀ ರಿಲೀಸ್ ಕಹಾನಿ ಜೊತೆಗೆ ಪುತ್ರಿ ಆರಾಧನಾ ಅವರು ಜೂನಿಯರ್​ ಎನ್​ಟಿಆರ್ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 13ರಂದು ತೆರೆಕಂಡ ಮಾರಕಾಸ್ತ್ರ ಚಿತ್ರ ಇದೀಗ ರೀ ರಿಲೀಸ್ ಆಗುತ್ತಿದೆ. ಈ ಸಿನಿಮಾ 26 ನಿಮಿಷ ಟ್ರಿಮ್ ಆಗಿ, ಹೊಸ ರೂಪ ಪಡೆದು ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ.

2017ರಲ್ಲಿ ಉಪ್ಪು ಹುಳಿ ಖಾರ ಚಿತ್ರದ ಬಳಿಕ ಪತಿ ಕೋಟಿ ರಾಮುರನ್ನ ಕಳೆದುಕೊಂಡ ಮಾಲಾಶ್ರೀ ಈ ಚಿತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಬಳ್ಳಾರಿ ಮೂಲದ ಗುರುಮೂರ್ತಿ ಸುನಾಮಿ ನಿರ್ದೇಶನ ಹಾಗೂ ತುಮಕೂರಿನ ಕೋಮಲಾ ನಟರಾಜ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬಂದಿದೆ.

ತೆಲುಗಿನಲ್ಲಿ ಬಿಗ್ ಓಪನಿಂಗ್

ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂತಾದರೂ, ಐದಾರು ಸಿನಿಮಾಗಳ ರಿಲೀಸ್​​ನಿಂದ ಚಿತ್ರಮಂದಿರದಲ್ಲಿ ಸಿನಿಮಾವನ್ನ ಉಳಿಸಿಕೊಳ್ಳಲಾಗಲಿಲ್ಲ. ಇದೀಗ ಕಳೆದ ವಾರ ತೆಲುಗಿನಲ್ಲಿ ಮಾರಣಾಯುಧಂ ಟೈಟಲ್​​ನಲ್ಲಿ ಆಂಧ್ರದಲ್ಲಿ ಬಹುದೊಡ್ಡ ಓಪನಿಂಗ್ ಪಡೆದ ಈ ಚಿತ್ರ, ಇದೀಗ ಕನ್ನಡದಲ್ಲಿ ಮಾರಕಾಸ್ತ್ರ ಹಾಗೂ ತೆಲುಗಿನ ಮಾರಣಾಯುಧಂ ಹೀಗೆ ಎರಡೂ ಭಾಷೆಯಲ್ಲಿ ಇದೇ ಏಪ್ರಿಲ್ 26ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ.

ರೈತರಿಗೆ ಮೊದಲ ಶೋ ಉಚಿತ

ನರ್ತಕಿ ಚಿತ್ರಮಂದಿರದ ಮ್ಯಾನೇಜರ್ ಯಾದವ್ ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡುತ್ತಿದ್ದಾರೆ. ಚುನಾವಣೆ ದಿನದಂದೇ ಬಿಡುಗಡೆ ಆಗುತ್ತಿರುವುದರಿಂದ ನಿರ್ಮಾಪಕ ನಟರಾಜ್ ಪೌರ ಕಾರ್ಮಿಕರಿಗೆ ಹಾಗೂ ರೈತರಿಗೆ ಮೊದಲ ಶೋ ಉಚಿತವಾಗಿ ಪ್ರದರ್ಶನ ಮಾಡುತ್ತಿದ್ದಾರೆ.

Jr NTR ಜೊತೆ ಕಾಟೇರ ಕ್ವೀನ್

ಪವರ್ ಟಿವಿ ಜೊತೆ ಮಾತನಾಡಿರುವ ಮಾಲಾಶ್ರೀ, ತಮ್ಮ ಮಗಳ ಬೆಳವಣಿಗೆಯ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಕಾಟೇರ ಸಕ್ಸಸ್​ ಬಳಿಕ ಆರಾಧನಾ ಅವ​ರ ಎರಡನೇ ಸಿನಿಮಾ ಜೂನಿಯರ್ ಎನ್​ಟಿಆರ್ ಜೊತೆ ಮಾತುಕತೆ ನಡೆಯುತ್ತಿದೆ. ಅವರೇ ಅಫಿಶಿಯಲಿ ಅನೌನ್ಸ್ ಮಾಡಲಿ, ಶ್​..! ಎಂದು ಹೇಳಿದರು.

  • ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES