Saturday, May 4, 2024

ಬಾಲಕಿ ಮೇಲೆ ಅನ್ಯಕೋಮಿನ ಯುವಕನಿಂದ ಅತ್ಯಾಚಾರ!

ಬೀದರ್ : ಅನ್ಯಕೋಮಿನ ಯುವಕನೊಬ್ಬ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಬೀದರ್​ನಲ್ಲಿ ನಡೆದಿದೆ.

ಕಳೆದ 2 ವರ್ಷಗಳಿಂದ ಲಾಯಕ್ ಅಲಿ ಎಂಬಾತ ಬಾಲಕಿ ಮೇಲೆ ಅತ್ಯಾಚರವೆಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಬೀದರ್ ನಗರದ ಮಹಿಳಾ ಠಾಣೆಯಲ್ಲಿ ಯುವತಿ ತಾಯಿ ದೂರು ದಾಖಲಿಸಿದ್ದಾರೆ. ಸದ್ಯ, ಆರೋಪಿ ಲಾಯಕ್ ಅಲಿ ವಿರುದ್ಧ ಮಹಿಳಾ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಒಟ್ನಲ್ಲಿ, ಅನ್ಯಕೋಮಿನ ಯುವಕರಿಂದ ಹಿಂದೂ ಯುವತಿಯರ ಮೇಲೆ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಇದು ಲವ್​​​​ ಜಿಹಾದ್​ ಆಗಿರಬಹುದಾ? ಎಂಬ ಅನುಮಾನ ಸಹ ಕಾಡ್ತಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಬೇಕಿದೆ.

ಗೃಹಿಣಿ ಮತಾಂತರಕ್ಕೆ ಯತ್ನ

ಬೆಳಗಾವಿ ಜಿಲ್ಲೆ ಮುನವಳ್ಳಿಯಲ್ಲಿ ಮಹಿಳೆಗೆ ಆಮಿಷವೊಡ್ಡಿ ಲವ್ ಜಿಹಾದ್ ನಡೆಸಿದ ಆರೋಪ ಕೇಳಿ ಬಂದಿದೆ. 2 ಮಕ್ಕಳ ತಾಯಿ ಹಿಂದೆ ಬಿದ್ದಿದ್ದ ರಫೀಕ್ ಬೇಫಾರಿ, ಆಕೆಯ ತಲೆಕೆಡಿಸಿ ಮನೆಯಿಂದ ಕರೆದುಕೊಂಡು ಹೋಗಿದ್ನಂತೆ. ಕೆಲಸ ಕೊಡಿಸ್ತೀನಿ ಎಂದು ಆಕೆಯನ್ನು ಮರಳು ಮಾಡಿ ಮನೆಯಿಂದ ಕರೆದುಕೊಂಡು ಬಂದು ಪ್ರತ್ಯೇಕ ಮನೆ ಮಾಡಿ ಇರಿಸಿದ್ದ.

ನಿತ್ಯ 5 ಬಾರಿ ನಮಾಜ್ ಮಾಡಬೇಕು

ಬಳಿಕ ಲವ್ ನಾಟಕವಾಡಿ ಮತಾಂತರ ಮಾಡಲು ಯತ್ನಿಸಿದ್ದಾನೆ. ಕುಂಕುಮ ಹಚ್ಚಬಾರದು, ಬುರ್ಖಾ ಧರಿಸಬೇಕು. ನಿತ್ಯ 5 ಬಾರಿ ನಮಾಜ್ ಮಾಡಬೇಕು ಅಂತಾ ಪೀಡಿಸಿದ್ದಾನಂತೆ.. ಇದಕ್ಕೆ ಒಪ್ಪದಿದ್ದಾಗ ಕೆಲ ಫೋಟೊಗಳನ್ನ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಕೂಡ ಮಾಡಿದ್ದಾನೆ.

ಸೇರಿ 7 ಜನರ ವಿರುದ್ದ ಪ್ರಕರಣ ದಾಖಲು

ಸದ್ಯ, ಆತನ ಕಿರುಕುಳಕ್ಕೆ ಬೇಸತ್ತ ಮಹಿಳೆ ಈ ವಿಚಾರವನ್ನ ಗಂಡನಿಗೆ ತಿಳಿಸಿ ತನ್ನ ಮನೆ ಸೇರಿದ್ದಾಳೆ. ಇದಾದ ಬಳಿಕ ಪತಿಗೆ ನಡೆದ ವಿಚಾರವನ್ನೆಲ್ಲಾ ತಿಳಿಸಿ, ಆರೋಪಿ ರಫೀಕ್ ಸೇರಿ 7 ಜನರ ವಿರುದ್ದ ಸವದತ್ತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಸದ್ಯ, ಪೊಲೀಸರು ಆರೋಪಿ ರಫೀಕ್ ಹಾಗೂ ಆತನ ಪತ್ನಿ ಕೌಸರ್ ಬೇಫಾರಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES