Tuesday, May 7, 2024

KKR ವಿರುದ್ಧ RCBಗೆ 1 ರನ್​ ಸೋಲು : RCB ಸೋಲಿಗೆ ಕಾರಣ ಏನು ಕಾಮೆಂಟ್ ಮಾಡಿ

ಬೆಂಗಳೂರು : ಮತ್ತೆ ಸೋತ RCB. ತವರಲ್ಲಿ ಗೆದ್ದು ಬೀಗಿದ KKR. ಕೊನೆಯ ಓವರ್‌ನಲ್ಲಿ 3 ಸಿಕ್ಸ್‌ ಸಿಡಿಸಿದರೂ ಆರ್​ಸಿಬಿಗೆ ವಿಜಯಲಕ್ಷ್ಮಿ ಒಲಿಯಲಿಲ್ಲ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ 1 ರನ್​​ ರೋಚಕ ಗೆಲುವು ದಾಖಲಿಸಿತು.

ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನಡೆಸಿದ ಆರ್​ಸಿಬಿ ಟೂರ್ನಿಯಲ್ಲಿ ಸತತ 6ನೇ ಸೋಲು ಅನುಭವಿಸಿತು. ಕೋಲ್ಕತ್ತಾ ನೈಟ್ ರೈಡರ್ಸ್ ಒಂದು ರನ್‌ನಿಂದ ಆರ್‌ಸಿಬಿಯನ್ನು ಮಣಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತ ಕೆಕೆಆರ್​ ಮೊದಲು ಬ್ಯಾಟಿಂಗ್ ಮಾಡಿ, 222 ರನ್​ ಕಲೆಹಾಕಿತು. 223 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ 20 ಓವರ್​ಗಳಲ್ಲಿ 221 ರನ್​ಗಳಿಗೆ ಆಲೌಟ್​ ಆಯಿತು.

RCBಗೆ ಅತ್ಯಂತ ಕಡಿಮೆ ಅಂತರದ ಸೋಲು (ರನ್‌ಗಳಿಂದ)

  • ಕೆಕೆಆರ್ ವಿರುದ್ಧ 1 ರನ್​ ಸೋಲು (ಕೋಲ್ಕತ್ತಾ 2024 *)
  • ಕೆಕೆಆರ್ ವಿರುದ್ಧ 2 ರನ್​ ಸೋಲು (ಶಾರ್ಜಾ 2014)
  • SRH ವಿರುದ್ಧ 4 ರನ್​ ಸೋಲು (ಅಬುಧಾಬಿ 2021)
  • ಕೆಕೆಆರ್ ವಿರುದ್ಧ 5 ರನ್​ ಸೋಲು (ಕೋಲ್ಕತ್ತಾ 2008)
  • SRH ವಿರುದ್ಧ ರನ್​ ಸೋಲು (ಹೈದರಾಬಾದ್ 2018)

IPLನಲ್ಲಿ KKRಗೆ ಅತಿ ಕಡಿಮೆ ಅಂತರದ ಗೆಲುವು (ರನ್‌ಗಳಲ್ಲಿ)

  • RCB ವಿರುದ್ಧ 1 ಜಯ (ಕೋಲ್ಕತ್ತಾ 2024 *)
  • RCB ವಿರುದ್ಧ 2 ಜಯ  (ಶಾರ್ಜಾ 2014)
  • PBKS ವಿರುದ್ಧ 2 ಜಯ(ಅಬುಧಾಬಿ 2020)
  • SRH ವಿರುದ್ಧ 4 ಜಯ (ಕೋಲ್ಕತ್ತಾ 2024)

RELATED ARTICLES

Related Articles

TRENDING ARTICLES