Saturday, May 4, 2024

ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸಿ : ಜೆ.ಪಿ. ನಡ್ಡಾ ಆಗ್ರಹ

ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗ್ರಹಿಸಿದರು.

ಮೃತ ನೇಹಾ ಮನೆಗೆ ಭೇಟಿ ನೀಡಿ ನೇಹಾಳ ಪೋಷಕರಿಗೆ ಸಾಂತ್ವನ ಹೇಳಿದರು. ನೇಹಾ ತಂದೆ ನಿರಂಜನ ಹಿರೇಮಠ, ತಾಯಿ ಗೀತಾಗೆ ಧೈರ್ಯ ಹೇಳಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ನಾಯಕರು ಇದ್ದರು.

ಈ ಪ್ರಕರಣ ಅತ್ಯಂತ ಖಂಡನೀಯ. ಮಾನವೀಯ ಮೌಲ್ಯಗಳಿಗೆ ಅಘಾತವಾಗಿದೆ. ಈ ಘಟನೆಯನ್ನು ಖಂಡಿಸುತ್ತೇವೆ. ಇಡೀ ದೇಶ ಅವರ ಕುಟುಂಬದ ಜೊತೆಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಅವರ ಹೇಳಿಕೆ ಖಂಡಿನಿಯ ಎಂದು ತಿಳಿಸಿದರು.

ಕರ್ನಾಟಕದ ಜನತೆ ಇದನ್ನು ಕ್ಷಮಿಸುವುದಿಲ್ಲ

ತುಷ್ಟೀಕರಣದ ಪರಮಾವಧಿ ಇದಾಗಿದೆ. ಪ್ರಕರಣದ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ. ಪ್ರಕರಣಕ್ಕೆ ಮುಸುಕು ಹಾಕುವ ಪ್ರಯತ್ನ ನಡೆದಿದೆ. ಕರ್ನಾಟಕದ ಜನತೆ ಇದನ್ನು ಕ್ಷಮಿಸುವುದಿಲ್ಲ. ಪೊಲೀಸರು ಸೂಕ್ತ ತನಿಖೆ ಮಾಡಬೇಕು. ರಾಜ್ಯ ಪೊಲೀಸರು ಅಸಮರ್ಥರಿದ್ದರೆ, ಸಿಬಿಐಗೆ ವಹಿಸಿ ಎಂದು ಹೇಳಿದರು.

ರಾಜ್ಯ ಪೋಲೀಸರ ಮೇಲೆ ನಂಬಿಕೆ ಹೋಗಿದೆ

ಸಿಬಿಐಗೆ ರೆಫರ್ ಮಾಡಿದರೆ ನಾವು ಸೂಕ್ತ ತನಿಖೆ ಮಾಡಿಸುತ್ತೇವೆ. ನೇಹಾ ಅವರ ತಂದೆಗೂ ರಾಜ್ಯ ಪೋಲೀಸರ ಮೇಲೆ ನಂಬಿಕೆ ಹೋಗಿದೆ. ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಎಂದರು. ನೇಹಾ ಕೊಲೆ ಪ್ರಕರಣವನ್ನು ರಾಜಕೀಕರಣ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ, ಜೆ.ಪಿ. ನಡ್ಡಾ ಉತ್ತರಿಸಲು ನಿರಾಕರಿಸಿದರು.

RELATED ARTICLES

Related Articles

TRENDING ARTICLES