Wednesday, May 22, 2024

ಬಿಜೆಪಿ ಬಟನ್ ಒತ್ತಿದ್ರೆ ಅದೇ ನಿಮ್ಗೆ ‘AK-47’ ಇದ್ದಂಗೆ : ಶಾಸಕ ಯತ್ನಾಳ್

ಕಲಬುರಗಿ : ಬಿಜೆಪಿ ಬಟನ್ ‘AK-47’ ಇದ್ದಂತೆ, ಹಿಂದೂಗಳ ಸುರಕ್ಷತೆಗೆ ಅದನ್ನೇ ಒತ್ತಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಯಂತ್ರದಲ್ಲಿ ಬಿಜೆಪಿ ಬಟನ್ ಒತ್ತಿದರೆ ಅದೇ ನಿಮಗೆ ಎಕೆ 47 ಇದ್ದ ಹಾಗೆ. ಹಿಂದೂಗಳು ಸುರಕ್ಷಿತರಾಗಿ ಉಳಿಯಬೇಕಾದರೆ ಅದನ್ನೇ ಒತ್ತಬೇಕು ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ನಡೆದಿದೆ. ವಿಜಯಪುರದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಕೆಣಕಿರುವ ಒಂದಾದರು ಘಟನೆ ಇದ್ಯಾ? ಈ ಮೊದಲು ತರಕಾರಿ ತರಲು ಹೋದ್ರೆ ‘ಎ ಮಾಲ್ ಬಹುತ್ ಅಚ್ಚಾ ಹೈ’ ಎನ್ನುತ್ತಿದ್ರು. ಈಗ ನಮ್ಮ ವಿಜಯಪುರ ಮಂದಿ ತುಂಬಾ ಜಾಣರಾಗಿದ್ದಾರೆ. ಕುಂಕುಮ ಹಚ್ಚಿಕೊಂಡಿರುವವರನ್ನ ನೋಡಿ ಖರೀದಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಲಬುರಗಿಯ ಎಂಆರ್‍ಎಂಸಿ ಮೆಡಿಕಲ್ ಕಾಲೇಜಿನಲ್ಲಿ ಸ್ಟೈಫಂಡ್ ಹಗರಣವಾಗಿದೆ. ಎಂಬಿಬಿಎಸ್ ಹಾಗೂ ಎಂಡಿ ವಿದ್ಯಾರ್ಥಿಗಳ ಸ್ಟೈಫಂಡ್ ಹಣ ಲೂಟಿ ಮಾಡಲಾಗಿದೆ. ಹಗರಣದಲ್ಲಿ ಕಾಂಗ್ರೆಸ್ ನಾಯಕ ಇದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಆಗುತ್ತಿಲ್ಲ ಎಂದು ದೂರಿದ್ದಾರೆ.

ಇಂದಿರಾ ಗಂಡ ಯಾವುದು ಅಂತ ಗೊತ್ತಿಲ್ಲ

ಈಗ ವಕ್ಫ್‍ಗೆ 12 ಲಕ್ಷ ಎಕರೆ ಜಮೀನಿದೆ. ಸುಮ್ಮನೆ ಪಂಡಿತ ಜವಾಹರ್ ಲಾಲ್ ನೆಹರು ಅಂತಾರೆ. ಇವರ ಸಮಯದಲ್ಲಿ 12 ಲಕ್ಷ ಎಕರೆ ಜಮೀನನ್ನು ವಕ್ಫ್‍ಗೆ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಯಾವುದು ಗೊತ್ತಿಲ್ಲ. ಪ್ರಿಯಾಂಕಾ ಯಾವುದು ಗೊತ್ತಿಲ್ಲ. ರಾಬರ್ಟ್ ವಾದ್ರ ಯಾವುದು ಅಂತಾನೂ ಗೊತ್ತಿಲ್ಲ. ಇಂದಿರಾ ಗಾಂಧಿ ಗಂಡ ಯಾವುದು ಏನು ಅಂತ ಗೊತ್ತಿಲ್ಲ ಎಂದು ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES