Thursday, May 9, 2024

ವಿಜಯಪುರದಲ್ಲಿ ವರುಣಾರ್ಭಟ: ಮಳೆಯ ಸಿಂಚನಕ್ಕೆ ಜನರು ಸಂತಸ

ವಿಜಯಪುರ : ಬಿಸಿಲಿನಿಂದ ಕಂಗೆಟ್ಟಿದ್ದ ವಿಜಯಪುರ ಜಿಲ್ಲೆಯ ಜನತೆಗೆ ವರುಣ ಗುಡುಗು ಸಹಿತ ಮಳೆ ಸುರಿಸುವ ಮೂಲಕ ತಂಪೆರೆದಿದ್ದಾನೆ. ಮಳೆಯ ಆಗಮನದಿಂದ ಇಲ್ಲಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ಮಧ್ಯಾಹ್ನ ವಿಜಯಪುರ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು ಶೇ.42 ರಷ್ಟಿದ್ದ ಬಿಸಿಲಿನ ತಾಪಮಾನವನ್ನು ತಂಪಾಗಿಸಿದೆ. ಕಳೆದ ಅರ್ಧ ಗಂಟೆಯಿಂದ ಮಳೆ ಬಿಡುವಿಲ್ಲದೇ ಸುರಿಯುತ್ತಿದ್ದು ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ.

ಇದನ್ನೂ ಓದಿ: ಮೋದಿ 10 ಪರ್ಸೆಂಟ್ ಅಭಿವೃದ್ಧಿ ಮಾಡಿದ್ರೆ ನಾನು ಕ್ಷಮೆ ಕೇಳುತ್ತೇನೆ : ಮಲ್ಲಿಕಾರ್ಜುನ ಖರ್ಗೆ ಸವಾಲ್

ನಗರಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರದ ಹಲವೆಡೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಮಳುಗಡೆನಗರಿಯಲ್ಲಿ ವರ್ಷದ ಮೊದಲ ಮಳೆ :

ಬಾಗಲಕೋಟೆ : ಮುಳುಗಡೆ ನಗರಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು ಸುಡು ಬಿಸಿಲಿನಿಂದ ಕಂಗೆಟ್ಟ ಬಾಗಲಕೋಟೆಗೆ ವರ್ಷದ ಮೊದಲ ವರ್ಷಧಾರೆಯಾಗಿದ್ದು ಜನರು ಮುಖದಲ್ಲಿ ಮಂದಹಾಸ ಮೂಡಿದೆ. 40ರ ಗಡಿ ದಾಟಿದ ಜಿಲ್ಲೆಯ ತಾಪಮಾನದಿಂದ ಕಂಗೆಟ್ಟಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯ ಬಾಗಲಕೋಟೆ ನಗರ, ನವನಗರ, ವಿದ್ಯಾಗಿರಿಯಲ್ಲಿ ತುಂತುರು ಮಳೆಯಾಗಿದೆ.

RELATED ARTICLES

Related Articles

TRENDING ARTICLES