Sunday, October 6, 2024

ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ : ಸೋಲನ್ನೇ ಕಾಣದ RR ಬಗ್ಗುಬಡಿಯುತ್ತಾ GT?

ಬೆಂಗಳೂರು : ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್‌ ಟೈಟಾನ್ಸ್‌ ನಾಯಕ ಶುಭ್​ಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಐಪಿಎಲ್​ನ 24ನೇ ಪಂದ್ಯ ನಡೆಯುತ್ತಿದೆ. ಜೈಪುರದಲ್ಲಿ ಮಳೆಯಿಂದಾಗಿ ಟಾಸ್ ಪ್ರಕ್ರಿಯೆ ವಿಳಂಬವಾಗಿದೆ. ಟೂರ್ನಿಯಲ್ಲಿ ಸೋಲನ್ನೇ ಕಾಣದ ಸಂಜು ಪಡೆಗೆ ಸೋಲಿನ ರುಚಿ ತೋರಿಸಲು ಗಿಲ್ ಪಡೆ ರಣತಂತ್ರ ರೂಪಿಸಿದೆ.

ರಾಜಸ್ಥಾನ್ ರಾಯಲ್ಸ್​ ಆಡಿರುವ 4 ಪಂದ್ಯಗಳಲ್ಲಿ ನಾಲ್ಕೂ ಪಂದ್ಯ ಗೆದ್ದಿದೆ. 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್​ 5 ಪಂದ್ಯಗಳನ್ನು ಆಡಿದ್ದು, 2 ರಲ್ಲಿ ಗೆದ್ದು 3 ಪಂದ್ಯದಲ್ಲಿ ಸೋತಿದೆ. 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.

ಐಪಿಎಲ್​ ಟೂರ್ನಿಯಲ್ಲಿ ಈವರೆಗೆ ಎರಡು ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಗುಜರಾತ್ ಟೈಟಾನ್ಸ್​ 4 ಪಂದ್ಯಗಳಲ್ಲಿ ಗೆದ್ದಿದೆ. ರಾಜಸ್ಥಾನ್ ರಾಯಲ್ಸ್​ ಕೇವಲ ಒಂದು ಪಂದ್ಯದಲ್ಲಿ ಜಯ ಗಳಿಸಿದೆ. ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ಒಂದು ಬಾರಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಗುಜರಾತ್ ಗೆಲುವು ಸಾಧಿಸಿದೆ.

ರಾಜಸ್ಥಾನ್‌ ರಾಯಲ್ಸ್‌ 

ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರೋನ್ ಹೆಟ್ಮಯರ್, ರಿಯಾನ್ ಪರಾಗ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್

ಗುಜರಾತ್‌ ಟೈಟಾನ್ಸ್‌

ಶುಭಮನ್ ಗಿಲ್ (ನಾಯಕ), ಎಂ. ವೇಡ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್‌, ವಿಜಯ್ ಶಂಕರ್, ಎ. ಮನೋಹರ್, ರಾಹುಲ್‌ ತೆವಾಟಿಯ, ರಶೀದ್ ಖಾನ್‌, ನೂರ್‌ ಅಹ್ಮದ್‌, ಮೋಹಿತ್‌ ಶರ್ಮಾ, ಉಮೇಶ್‌ ಯಾದವ್‌, ಎಸ್. ಜಾನ್ಸನ್

RELATED ARTICLES

Related Articles

TRENDING ARTICLES