Friday, May 3, 2024

ಬೆಳಗ್ಗೆ ಬ್ರಷ್ ಮಾಡದಿದ್ದರೆ ಕ್ಯಾನ್ಸರ್ ಬರುತ್ತೆ ಹುಷಾರ್..!

ಬೆಂಗಳೂರು : ಹುಷಾರ್..! ಬೆಳಗ್ಗೆ ಬ್ರಷ್ ಮಾಡದಿದ್ದರೆ ಕ್ಯಾನ್ಸರ್​ ಬರುತ್ತೆ. ಬೆಳಗ್ಗೆ ಎದ್ದ ಕೂಡಲೇ ಬ್ರಷ್ ಮಾಡದೇ, ಮುಖ ತೊಳೆಯದೇ ಕೆಲವರು ಟೀ ಹಾಗೂ ಕಾಫಿ ಕುಡಿಯುವ ಕೆಟ್ಟ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಅಂತಹವರಿಗೆ ಅರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬೆಳಗ್ಗೆ ಸರಿಯಾಗಿ ಹಲ್ಲು ಉಜ್ಜದಿದ್ದರೆ (ಬ್ರಷ್) ಕರುಳಿನ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿದೆ ಎಂದು ಯುಸ್ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಫ್ರೆಡ್ ಹಚಿನ್ಸನ್ ಕ್ಯಾನ್ಸರ್​ ಕೇಂದ್ರದ ಸಂಶೋಧಕರು 200 ಕ್ಯಾನ್ಸರ್ ರೋಗಿಗಳನ್ನು ಅಧ್ಯಯನ ಮಾಡಿದ್ದರು. ಆಗ ಕ್ಯಾನ್ಸರ್ ಬಾಧಿತ ಅರ್ಧದಷ್ಟು ರೋಗಿಗಳ ಜೀವಕೋಶಗಳು ದಂತ ಸೂಕ್ಷ್ಮ ಜೀವಿಗಳನ್ನು ಒಳಗೊಂಡಿರುವುದು ಕಂಡುಬಂದಿದೆ.

20 ರಿಂದ 49 ವರ್ಷದವರಿಗೆ ಕ್ಯಾನ್ಸರ್​

ಇವು ಕರುಳಿನ ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. 20 ರಿಂದ 49 ವರ್ಷದವರು ಕರುಳು ಕ್ಯಾನ್ಸರ್​ನಿಂದ ಬಳಲುತ್ತಿದ್ದು, ವರ್ಷಕ್ಕೆ ಶೇ.1.5 ರಷ್ಟು ಹೆಚ್ಚಾಗುತ್ತಿದೆ ಎಂದು ಯುಸ್ ಸಂಶೋಧಕರು ಮಾಹಿತಿ ನೀಡಿದ್ದಾರೆ.

ಇನ್ನೂ ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ಬಾಯಿ, ಹಲ್ಲು ಮತ್ತು ವಸಡುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುಬೇಕು.

  • ಮೌತ್‌ವಾಶ್‌ಗಳ ಆಯ್ಕೆಯಲ್ಲಿ ಎಚ್ಚರವಹಿಸಿ
  • ಬಾಯಿಯ ಕುಹರದ ಬದಲಾವಣೆಗಳನ್ನು ಆಗಾಗ್ಗೆ ಪರಿಶೀಲಿಸಿ
  • ಉಗುರು ಕಚ್ಚುವುದನ್ನು ಮೊದಲು ನಿಲ್ಲಿಸಿ.
  • ಟೂತ್‌ಪಿಕ್ ಬಳಕೆ ತಪ್ಪಿಸಿ
  • ಹಲ್ಲುಗಳನ್ನು ಹೆಚ್ಚು ಉಜ್ಜಿದಷ್ಟು ಹಾಳಾಗುವುದೂ ಹೆಚ್ಚು
  • ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಷ್​ಗಳನ್ನು ಬದಲಿಸಿ
  • ಊಟ ಮಾಡುವ ಮಧ್ಯೆ ಸ್ನ್ಯಾಕ್ಸ್ ಸೇವನೆ ನಿಯಂತ್ರಿಸಬೇಕು.
  • ದಿನಕ್ಕೆರಡು ಬಾರಿ ಹಲ್ಲುಜ್ಜಿ, ಸಕ್ಕರೆ ಸೇವನೆ ತ್ಯಜಿಸಿ
  • ಚಾಕೊಲೇಟ್​ ಸೇವನೆ ಮಾಡುವುದನ್ನು ನಿಲ್ಲಿಸಿ

RELATED ARTICLES

Related Articles

TRENDING ARTICLES