Friday, May 3, 2024

ಬೇಸಿಗೆಯಲ್ಲಿ ಈ ಹಣ್ಣುಗಳನ್ನು ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಬೇಸಿಗೆಯ ಬಿಸಿ ಎದುರಿಸಲು ನಾವು ಅತಿ ಹೆಚ್ಚಾಗಿ  ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ನಮ್ಮ ದೇಹಕ್ಕೆ ನೀರು, ಪೌಷ್ಟಿಕಾಂಶ, ವಿಟಮಿನ್, ಆ್ಯಂಟಿಆಕ್ಸಿಡೆಂಟ್ಸ್ ಅಂಡ್ ಫೈಬರ್‍ನ ಉತ್ತಮ ಮೂಲವೂ ಹಣ್ಣುಗಳಿಂದ ನಮ್ಮ ದೇಹಕ್ಕೆ ಸಿಗುತ್ತದೆ. ಹಾಗಿದ್ರೆ ನಾವು ಈ ಸೀಸನ್​ನಲ್ಲಿ ನಾವು ಯಾವೆಲ್ಲಾ ಹಣ್ಣುಗಳನ್ನು ಸೇವನೆ ಮಾಡಬೇಕು ಎಂಬುವುದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾವಿನಹಣ್ಣು: ಮಾವಿನ ಹಣ್ಣಿನಲ್ಲಿ ಕ್ಯಾನ್ಸನ್ ನಿರೋಧಕ ಅಂಶಗಳು ಇರುತ್ತವೆ ಎಂದು ಗುರುತಿಸಲಾಗಿದೆ. ಇದು, ವಿಟಮಿನ್ ಸಿಗೆ ಉತ್ತಮ ಮೂಲವೂ ಆಗಿದ್ದು, ದೇಹದ ತಾಪಮಾನ ಕಾಯ್ದುಕೊಳ್ಳಲು, ಬಾಯಿಯ ಆರೋಗ್ಯ ರಕ್ಷಿಸಲು, ಚರ್ಮದ ತ್ವಚೆ ಕಾಯ್ದುಕೊಳ್ಳಲು ಸಹಕಾರಿ. ಮಾವಿನಹಣ್ಣಿನಲ್ಲಿ ಹೆಚ್ಚಿನ ಫೈಬರ್ ಅಂಶ ಇರುತ್ತದೆ. ಇದು, ದೀರ್ಘಕಾಲ ಚೇತೋಹಾರಿಯಾಗಿ ಇರಲು ನೆರವಾಗಲಿದೆ.

ಕಲ್ಲಂಗಡಿ,ಖರ್ಬೂಜಸಿಹಿಯಾದ, ಸುವಾಸಿತ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಸೇವಿಸಬಹುದಾದ ಇನ್ನೊಂದು ಹಣ್ಣು. ಇದರಲ್ಲಿ ಫೈಬರ್, ಪೊಟಾಷಿಯಂ, ವಿಟಮಿನ್ ಸಿ, ಬೆಟಾ ಕ್ಯಾರೊಟೆನೆ ಅಂಶಗಳು ಯಥೇಚ್ಚವಾಗಿ ಇರುತ್ತವೆ. ಹೆಚ್ಚಿನ ನೀರಿನ ಅಂಶ ಅಂದರೆ ಇದರಲಲಿ ಶೇ 90ರಷ್ಟು ನೀರಿನ ಅಂಶ ಇದ್ದು, ದೇಹಕ್ಕೆ ಅಗತ್ಯವಾಗಿರುತ್ತದೆ.

ಕಲ್ಲಂಗಡಿ, ಖರ್ಬೂಜ ಅಂಥ ಹಣ್ಣುಗಳು ಕಡಿಮೆ ಪ್ರಮಾಣದ ಕ್ಯಾಲೊರಿ ಹೊಂದಿದ್ದು, ತೂಕದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹೆಚ್ಚಿನದಾಗಿ ಈ ಹಣ್ಣನ್ನು ಮಧುಮೇಹಿಗಳು ಕೂಡಾ ಸೇವಿಸಬಹುದು.

ಸ್ಟ್ರಾಬೆರ್ರಿಸ್ಟ್ರಾಬೆರ್ರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇದ್ದು, ಪೊಟಾಷಿಯಂ ಅಂಶ ಕೂಡಾ ಇರುತ್ತದೆ. ಉತ್ತಮ ವರ್ಣದ, ಗುಣಮಟ್ಟದ ಸ್ಟ್ರಾಬೆರ್ರಿ ಗುರುತಿಸಿ ಸೇವಿಸುವುದು ಉತ್ತಮ.

ಪೀಚಸ್ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಇರುತ್ತವೆ. ಇದರಲ್ಲಿ ಭಿನ್ನ ವರ್ಗದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅಂದರೆ ಫೈಬರ್, ವಿಟಮಿನ್ ಎ, ಸಿ,  ಇ ಪೊಟಾಷಿಯಂ ಹಾಗೂ ಜಿಂಕ್ ಅಂಶಗಳಿವೆ. ಇದರಲ್ಲಿ  ಕೊಬ್ಬಿನ ಅಂಶ ಇರುವುದಿಲ್ಲ. ಟ್ರಾನ್ಸ್ ಫ್ಯಾಟ್ಸ್ ಇರುತ್ತದೆ. ಇದು, ಅತ್ಯುತ್ತಮ ಆಹಾರ ಕ್ರಮವಾಗಿದೆ.

ಪಪ್ಪಾಯಇದು, ಪಥ್ಯ ಕ್ರಮಕ್ಕೆ ಉತ್ತಮವಾದ ಆಹಾರ. ಪಪ್ಪಾಯದಲ್ಲಿ ನಿತ್ಯ ವೈದ್ಯರು ಶಿಫಾರಸು ಮಾಡುವ ಪೌಷ್ಟಿಕಾಂಶಗಗಳು ಶೇ 300ರಷ್ಟು  ಇರುತ್ತವೆ. ಇದು ವಿಟಮಿನ್ ಎ, ಇ ಅಂಶ ಕೂಡಾ ಇರುತ್ತದೆ.

RELATED ARTICLES

Related Articles

TRENDING ARTICLES