Thursday, May 9, 2024

Raichur Lok Sabha Election Survey : ಪ್ರಬಲ ಎದುರಾಳಿಗೆ ಮಣ್ಣು ಮುಕ್ಕಿಸುತ್ತಾರಾ ಮಾಜಿ ಅಧಿಕಾರಿ?

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ಕಾಲ್​ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 5.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ಲೋಕಸಭಾ ಕ್ಷೇತ್ರದ ಪರಿಚಯ :

ಲೋಕಸಭಾ ಕ್ಷೇತ್ರ: ರಾಯಚೂರು

ಹಾಲಿ ಸಂಸದ: ರಾಜ ಅಮರೇಶ್ವರ ನಾಯಕ

2024 ರ ಲೋಕಸಭಾ ಅಭ್ಯರ್ಥಿಗಳು :

ಬಿಜೆಪಿ ಅಭ್ಯರ್ಥಿ : ರಾಜ ಅಮರೇಶ್ವರ ನಾಯಕ

ಕಾಂಗ್ರೆಸ್​ ಅಭ್ಯರ್ಥಿ :  ಕಾಂಗ್ರೆಸ್ :  ಕುಮಾರ್​ ನಾಯ್ಕ್​

2019 ಬಲಾಬಲ  :

ರಾಜಾ ಅಮರೇಶ್ ನಾಯಕ್ : ಬಿಜೆಪಿ : 5,98,337 : ಶೇ. 53.21

ಬಿ.ವಿ. ನಾಯಕ್   : ಕಾಂಗ್ರೆಸ್ : 4,80,621 : ಶೇ. 42.75

ನೋಟಾ  (ಯಾರಿಗೂ ಮತವಿಲ್ಲ) : 14,921 : ಶೇ. 1.33

ಚಲಾವಣೆಯಾದ ಒಟ್ಟು ಮತಗಳು :  11,24,962 : ಶೇ. 58.34

ಗೆಲುವಿನ ಅಂತರ : 1,17,716 :  ಶೇ. 10.46

ಮತದಾರರ ವಿವಿರ :

ಪುರುಷರು : 9,85,675

ಮಹಿಳೆಯರು : 10,05,246

ಒಟ್ಟು : 19,91,218

( ತೃತೀಯ ಲಿಂಗಿಗಳು : 297)

ಜಾತಿವಾರು ಲೆಕ್ಕಾಚಾರ :

ಲಿಂಗಾಯತ :  3,80,536

ಎಸ್​ಸಿ ಎಸ್​ಟಿ : 6,13,972

ಕುರುಬರು : 3,15,269

ಮುಸ್ಲಿಂ : 3,13,298

ಇತರೆ  : 3,29,470

ಇದನ್ನೂ ಓದಿ: Hassan Lok Sabha Election Survey 2024 : ಹಾಸನದಲ್ಲಿ ಯಾರಿಗೆ ಜಯ? ಯಾರಿಗೆ ಸೋಲು?

ಬಿಜೆಪಿ ಪ್ಲಸ್ :

ಮೂರನೇ ಬಾರಿಯೂ ಮೋದಿ ಅಲೆ ವರ್ಕೌಟ್ ವಿಶ್ವಾಸ

ಬಿಜೆಪಿ ಜೊತೆಯಲ್ಲಿ ಜೆಡಿಎಸ್ ಮೈತ್ರಿ ಆಗಿರುವುದು

ಕೊನೆ ಕ್ಷಣದಲ್ಲಿ ಟಿಕೆಟ್​ ಗಿಟ್ಟಿಸಿದ ಸಂಸದರಿಗೆ ಮತ್ತೆ ಗೆಲ್ಲುವ ಛಲ

ಜನಾರ್ದನ ರೆಡ್ಡಿ ಸೇರ್ಪಡೆಯಿಂದ ಬಿಜೆಪಿಗೆ ಮತ್ತಷ್ಟು ಬಲ

ಬಿಜೆಪಿ ಮೈನಸ್ :

ಹೇಳಿಕೊಳ್ಳುವಂಥ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ

ಹಾಲಿ, ಮಾಜಿ ಸಂಸದರು ಸೇರಿ ಬಿಜೆಪಿಯಲ್ಲಿನ ಬಣ ರಾಜಕೀಯ

ಮೈತ್ರಿಯಿಂದ ಉಂಟಾಗಿರುವ ರಾಜಕೀಯ ಗೊಂದಲ

ಕಾಂಗ್ರೆಸ್ ಪ್ಲಸ್ :

ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡಿದ್ದು

ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದಿರುವುದು

ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೆಲುವಿನ ವಿಶ್ವಾಸ ಮೂಡಿಸಿರುವುದು

ಕಾಂಗ್ರೆಸ್ ಮೈನಸ್ :

ಗ್ಯಾರಂಟಿ ನೆಪದಲ್ಲಿ ಬೇರಾವುದೇ ಯೋಜನೆ ಜಾರಿಯಾಗಿಲ್ಲ

ಮೋದಿ ಅಲೆ, ಬಿಜೆಪಿ ಅಬ್ಬರ ಎದುರಿಸುವ ಸಮರ್ಥ ಅಭ್ಯರ್ಥಿ ಇಲ್ಲ

ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗಿರುವ ಗುಂಪುಗಾರಿಕೆ

ಪವರ್​ ಟಿವಿ ಸರ್ವೆ ರಿಸಲ್ಟ್​ :

ರಾಯಚೂರು ಲೋಕಸಭಾ ಕ್ಷೇತ್ರದಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ರಾಯಚೂರಿನಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಬಿದ್ದಿದೆ? ಕಮಲದ ನಾಗಾಲೋಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​ ಪಕ್ಷ? ಬಿಸಿಲ ನಾಡಿನಲ್ಲಿ ಜಯಭೇರಿ ಬಾರಿಸುತ್ತಾ ಕಮಲ ಪಕ್ಷ? ಎಲ್ಲದಕ್ಕೂ ಇಲ್ಲಿದೆ ಉತ್ತರ.

ರಾಯಚೂರು ಲೋಕಸಭಾ ಕ್ಷೇತ್ರದಿಂದ ಒಟ್ಟು ಕರೆಗಳು – 7170

ಪುರುಷ ಮತದಾರರಿಂದ 6707, ಮಹಿಳಾ ಮತದಾರರಿಂದ 463 ಕರೆಗಳು

ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 3530, ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ಸ್​ – 3640

ರಾಯಚೂರು ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 0

ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 50%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 50%

ಇತರರಿಗೆ ಬಂದ ಶೇಕಡಾವಾರು ಮತಗಳು – 0

ಬಿಜೆಪಿ ವಿರುದ್ಧ ಕಾಂಗ್ರೆಸ್ಗೆ 110 ಮತಗಳ ಮುನ್ನಡೆ

ಸದ್ಯದ ಟ್ರೆಂಡ್​ :

​​ರಾಯಚೂರು ಲೋಕಸಭಾ ಫೈಟ್​ನಲ್ಲಿ ತೀವ್ರ ಪೈಪೋಟಿ

ಬಿಜೆಪಿ-ಕಾಂಗ್ರೆಸ್​ ನಡುವಿನ ಫೈಟ್​​​ನಲ್ಲಿ ಕಾಂಗ್ರೆಸ್​ ಅಲ್ಪ ಮುನ್ನಡೆ

ಹಾಲಿ ಸಂಸದರಿಗೆ ಶಾಕ್ ನೀಡ್ತಾರಾ ಕೈ ಅಭ್ಯರ್ಥಿ ಕುಮಾರ್ ನಾಯ್ಕ್?

ಕೊನೇ ಕ್ಷಣದಲ್ಲಿ ಕಾಂಗ್ರೆಸ್​ಗೆ ತಿರುಗೇಟು ನೀಡ್ತಾರಾ ಬಿಜೆಪಿ ಅಭ್ಯರ್ಥಿ?

ಎರಡೂ ಪಕ್ಷಗಳಿಗೂ ಸಮ ಪ್ರಮಾಣದಲ್ಲಿ ಮತ ಹಾಕಿರುವ ಮತದಾರರು.

RELATED ARTICLES

Related Articles

TRENDING ARTICLES