ಬೆಂಗಳೂರು: ಅಶ್ವಿನಿ ಪುನೀತ್ರಾಜ್ಕುಮಾರ್ ಅವರು ಆಡಿ ಕ್ಯೂ7 ಕಾರು ಖರೀದಿ ಮಾಡಿದ್ದಾರೆ.
ಹೌದು,ಗ್ರೇ ಬಣ್ಣದ ಆಡಿ ಕ್ಯೂ 7 ಕಾರು ಇದಾಗಿದ್ದು,ಕಾರಿನ ಬೆಲೆ ಬೆಂಗಳೂರಿನಲ್ಲಿ 1.10 ಕೋಟಿ ರೂ. ಇಂದ 1.20 ಕೋಟಿ ರೂ.ಗಳಿವೆ.
ಈ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 14 ಕಿ.ಮೀವರೆಗೂ ಮೈಲೇಜ್ ನೀಡುತ್ತದೆ. ಕಾರಿನ ಒಳ ವಿನ್ಯಾಸ ಕೂಡ ಅದ್ಭುತವಾಗಿದೆ.
ಪುನೀತ್ ರಾಜ್‌ಕುಮಾರ್ ಅವರಿಗೂ ಕಾರುಗಳ ಬಗ್ಗೆ ವಿಶೇಷ ಪ್ರೀತಿ ಇತ್ತು. ಹಲವು ಐಶಾರಾಮಿ, ದುಬಾರಿ ಕಾರುಗಳನ್ನು ಪುನೀತ್ ರಾಜ್‌ಕುಮಾರ್ ಖರೀದಿ ಮಾಡಿದ್ದರು.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಿನಿಮಾ ನಿರ್ಮಾಪಕಿ. ಜತೆಗೆ ಸಿನಿಮಾಗಳ ಪ್ರಚಾರ ಕಾರ್ಯದಲ್ಲಿಯೂ ಭಾಗಿಯಾಗಿತ್ತಾರೆ
ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ
ಪುನೀತ್ ರಾಜ್‌ಕುಮಾರ್ ಅವರಿಗೂ ಐಷಾರಾಮಿ ಕಾರಿನ ಕ್ರೇಜ್ ಇತ್ತು. ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿ ಮಾಡಿದ್ದಾರೆ. ಹೊಸ ಕಾರಿನ ಜೊತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿಂತಿರುವ ಫೋಟೋವನ್ನು ಆಡಿ ಬೆಂಗಳೂರು ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ.
ಅಶ್ವಿನಿ ಪುನೀತ್ ಖರೀದಿಸಿದ ಕಾರಿನ ಬೆಲೆ ಎಷ್ಟು?
ಈ ಕಾರಿನ ಬೆಲೆ 1.10 ಕೋಟಿಯಿಂದ 1.20 ಕೋಟಿ ರೂಪಾಯಿಗಳ ವರೆಗೂ ಇದೆ ಎನ್ನಲಾಗ್ತಿದೆ. ಅಶ್ವಿನಿ ಅವರು ಆಡಿ ಕ್ಯೂ7 ಟಾಪ್ ಎಂಡ್ ಮಾಡೆಲ್ ಅನ್ನೇ ಖರೀದಿಸಿದ್ದಾರೆ ಎನ್ನಲಾಗಿದೆ.