Wednesday, May 1, 2024

ವಿಕ್ರಂ ಲ್ಯಾಂಡರ್​ಗೆ ‘ಶಿವ ಶಕ್ತಿ’ ಎಂದು ನಾಮಕರಣ : ಐಎಯು ಅನುಮೋದನೆ

ಬೆಂಗಳೂರು : ಚಂದ್ರಯಾನ-3 ಸಂಬಂಧಿಸಿದಂತೆ ಗುಡ್​ ನ್ಯೂಸ್​ ಹೊರಬಿದ್ದಿದ್ದು, ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಸಲಾಗಿದೆ. 

ಅಂತರಾಷ್ಟ್ರೀಯ ಖಗೋಳ ಒಕ್ಕೂಟ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3 ಮಿಷನ್‌ನ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಎಂದು ಹೆಸರಿಡಲು ಅನುಮೋದನೆ ನೀಡಿದೆ.

ಮಾರ್ಚ್​ 19ರಂದು ಅನುಮೋದನೆ ನೀಡಿದ್ದು, ಇದೀಗ ಅಧಿಕೃತವಾಗಿ ಚಂದ್ರಯಾನ-3 ಇಳಿದ ಸ್ಥಳವನ್ನು ವಿಶ್ವದಾದ್ಯಂತ ಶಿವಶಕ್ತಿ ಪಾಯಿಂಟ್ ಎಂದು ಗುರುತಿಸಲಾಗುತ್ತದೆ. ಈ ಮಿಷನ್​ನ ವಿಕ್ರಂ ಲ್ಯಾಂಡರ್ ಕಳೆದ ವರ್ಷ ಆಗಸ್ಟ್ 23ರಂದು ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ವಿಕ್ರಂ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವ ಶಕ್ತಿ’ ಎಂದು ಘೋಷಿಸಿದ್ದರು. ಇದಾದ 7 ತಿಂಗಳ ಬಳಿಕ ಈ ಸ್ಥಳಕ್ಕೆ ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಡಲು ಐಎಯು ಅನುಮೋದನೆ ನೀಡಿದೆ.

RELATED ARTICLES

Related Articles

TRENDING ARTICLES