Sunday, October 6, 2024

ಗೆದ್ದ ಪಂಜಾಬ್, ಬಿದ್ದ ಡೆಲ್ಲಿ.. ಪಂತ್ ಪಡೆ ಎದುರು ಗೆಲುವಿನ ನಗೆ ಬೀರಿದ ಧವನ್ ಪಡೆ

ಬೆಂಗಳೂರು : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶಿಖರ್ ಧವನ್ ಸಾರಥ್ಯದ ಪಂಜಾಬ್ ಕಿಂಗ್ಸ್ 4 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಮುಲ್ಲನ್‌ಪುರದ ಮಹಾರಾಜ ಯದ್ವೇಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 174 ರನ್ ಗಳಿಸಿತ್ತು. 175 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್​ 19.2 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಪಂಜಾಬ್ ಪರ ಸ್ಯಾಮ್ ಕರನ್ 63, ಪಿ. ಸಿಂಗ್ 26, ಲಿಯಾಮ್ ಲಿವಿಂಗ್‌ಸ್ಟೋನ್ ಅಜೇಯ 38, ನಾಯಕ ಶಿಖರ್ ಧವನ್ 22 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲ್​ದೀಪ್ ಯಾದವ್ ಹಾಗೂ ಖಲೀಲ್ ಅಹಮ್ಮದ್ ತಲಾ 2 ವಿಕೆಟ್, ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದರು.

ಇನ್ನೂ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು. ಮಿಚೆಲ್ ಮಾರ್ಷ್ 20, ಡೇವಿಡ್ ವಾರ್ನರ್ 29, ಹೋಪ್ 33 ರನ್, ರಿಷಬ್ ಪಂತ್ 18, ಅಕ್ಷರ್ ಪಟೇಲ್ 21, ಅಭಿಷೇಕ್ ಪೊರೆಲ್ 32 ರನ್​ ಸಿಡಿಸಿದರು. ಪಂಜಾಬ್​ ಪರ ಹರ್ಷಲ್ ಪಟೇಲ್ ಹಾಗೂ ಅರ್ಶದೀಪ್ ತಲಾ 2, ರಬಾಡ, ಬ್ರಾರ್, ರಾಹುಲ್ ಚಹಾರ್ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES