Thursday, December 5, 2024

ಪವರ್​ ಟಿವಿ ಎಂಡಿ ಶ್ರೀಯುತ ರಾಕೇಶ್ ಶೆಟ್ಟಿಯವರಿಗೆ ಜನ್ಮದಿನದ ಶುಭಕೋರಿದ ಸಿದ್ದಲಿಂಗ ಸ್ವಾಮೀಜಿ​​

ನಲ್ಮೆಯ ಅಂತರಂಗದ ಶಿಷ್ಯರಾದ ಶ್ರೀಯುತ ರಾಕೇಶ್ ಶೆಟ್ಟಿಯವರಿಗೆ ಜನ್ಮವರ್ಧಂತಿಯ ಶುಭಾಶೀರ್ವಾದಗಳು.

ಮನುಷ್ಯನ ಜನ್ಮ ಸಾರ್ಥಕವಾಗಬೇಕಾದರೆ, ಸಾಧನೆ ಅತ್ಯಮೂಲ್ಯ. ಇಂತಹ ಸಾಧಕರಲ್ಲಿ ನಮ್ಮ ಅಂತರಂಗದ ಶಿಷ್ಯರಾದ ಶ್ರೀಯುತ ರಾಕೇಶ್ ಶೆಟ್ಟಿಯವರು ಒಬ್ಬರು. ನೀವು ಕಷ್ಟ ಪಟ್ಟು ಸಾಧನೆಯನ್ನು ಮಾಡಿ ಸ್ಥಾಪಿಸಿದ ಪವರ್​ ಟಿವಿ ಇಂದು ನಾಡಿನಾದ್ಯಂತ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ.

ನಾವು ನಮ್ಮ ಶಿಷ್ಯಂದಿರಿಗೆಲ್ಲಾ ಒಂದು ಕಿವಿಮಾತು ಹೇಳುತ್ತಿರುತ್ತೇವೆ. ಅದೇನೆಂದರೆ – ‘‘ಆತ್ಮೀಯ ಶಿಷ್ಯಂದಿರೇ ನೀವುಗಳು ಈ ಜಗತ್ತಿನ ಬಂದುದಕ್ಕೆ ಏನಾದರೊಂದು ಸಾಧನೆ ಮಾಡಿ ಹೆಸರಗಳಿಸಿ ಅಜರಾಮರವಾಗಬೇಕು. ಇಲ್ಲದಿದ್ದಲ್ಲಿ ಜಡವಸ್ತುಗಳಿಗೂ ನಿಮಗೂ ವ್ಯತ್ಯಾಸ ಇಲ್ಲದಂತಾಗುವುದು. ಜೀವನದಲ್ಲಿ ಏನು ಸಾಧಿಸಿದ್ದಾರೆ ಭಗವಂತನ ನಮಗೆ ಮಾನವ ಜನ್ಮ ನೀಡಿದ್ದು ವ್ಯರ್ಥವಾದಂತೆ.’’ ನಮ್ಮ ಪ್ರೀತಿಯ ಶಿಷ್ಯರಾದ ಪವರ್​ ಟಿವಿ ಸಂಸ್ಥಾಪಕರಾದ ಶ್ರೀಯುತ ರಾಕೇಶ್ ಶೆಟ್ಟಿಯವರ ಜನ್ಮ ವರ್ಧಂತಿಯ ನಿಮಿತ್ತ ಸಮಸ್ತ ಕರುನಾಡಿನ ಯುವ ಪೀಳಿಗೆಗೆ ಈ ಸಂದೇಶವನ್ನು ತಿಳಿಸುತ್ತಿದ್ದೇವೆ.

ಜನ್ಮ ಸಾರ್ಥಕತೆ ಯನ್ನು ಹೊಂದಬೇಕು, ಆಗ ಮಾತ್ರ ಗುರು-ದೈವ-ತಾಯಿ ತಂದೆಯರ ಮತ್ತು ಹೆಚ್ಚಾಗಿ ಸಮಾಜದ ಋಣವನ್ನು ತೀರಿಸಿದ ಭಾಗ್ಯ ನಮಗೆ ಸಂತೃಪ್ತಿಯನ್ನು ನೀಡುತ್ತದೆ. ನಿಮ್ಮಲ್ಲಿ ಗುರುವಿನ ಕಾರುಣ್ಯದಿಂದ ಶ್ರೀಜಗನ್ಮಾತೆಯಾದ ಇಷ್ಟಕಾಮೇಶ್ವರಿ ದೇವಿಯ ಅನುಗ್ರಹದಿಂದ ಪ್ರಚಂಡವಾದ ಇಚ್ಛಾಶಕ್ತಿ ನಿಮಗೆ ಪ್ರಾಪ್ತವಾಗಲಿ ಮತ್ತು ನಿಮಗೂ ನಿಮ್ಮ ಕುಟುಂಬದವರೆಲ್ಲರಿಗೂ, ಪವರ್ ಟಿವಿಯ ಸಮಸ್ತ ಆಡಳಿತ, ತಾಂತ್ರಿಕ, ಮಾಧ್ಯಮ ಬಳಗಕ್ಕೆಲ್ಲಾ ಶುಭವಾಗಲಿ ಎಂದು ಪರಮದಯಾಳು ಶ್ರೀ ಸಿದ್ಧಲಿಂಗೇಶ್ವರರ ಮತ್ತು ದೇವಿ ಇಷ್ಟ ಕಾಮೇಶ್ವರಿಯ ಸಂಪೂರ್ಣ ಅನುಗ್ರಹ ಕೃಪಾಕಟಾಕ್ಷ ತಮ್ಮ ಮೇಲಿರಲಿ, ಆಯುರಾರೋಗ್ಯ ಐಶ್ವರ್ಯಾದಿಗಳನ್ನು ದಯಪಾಲಿಸಿ, ಶಿವಜ್ಞಾನ ಪ್ರಾಪ್ತಿಯಾಗಲಿ. ಸದಾಕಾಲ ಕರುನಾಡಿನ ಪ್ರಜಾಸೇವೆಯನ್ನು ಮಾಡುವಂತೆ ಅನುಗ್ರಹಿಸಿ, ಶುಭಾಶೀರ್ವಾದವನ್ನು ತಿಳಿಸುತ್ತಿದ್ದೇವೆ.

‘‘ಒಳ್ಳೆಯದನ್ನೇ ಯೋಚಿಸಿ, ಒಳ್ಳೆಯದನ್ನೇ ಮಾಡಿ, ನಿಮಗೂ ಒಳಿತಾಗುತ್ತದೆ ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’’

ಇಂತಿ ಶಿವನಾಮ ಸ್ಮರಣೆಗಳೊಂದಿಗೆ ಶ್ರೀ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು

RELATED ARTICLES

Related Articles

TRENDING ARTICLES