Friday, May 3, 2024

Miss World 2024: ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಕ್ರಿಸ್ಟಿನಾ ಪಿಸ್ಕೋವಾ

ಮುಂಬೈ: ಭಾರತದಲ್ಲಿ 28 ವರ್ಷಗಳ ಬಳಿಕ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಕ್ರಿಸ್ಟಿನಾ ಪಿಸ್ಕೋವಾ ವಿಶ್ವ ಸುಂದರಿ ಕಿರೀಟ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 

ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆ ನಡೆದಿತ್ತು.71ನೇಯ ಮಿಸ್ ವರ್ಲ್ಡ್ ಆಗಿ ಕ್ರಿಸ್ಟಿನಾ ಪಿಸ್ಕೋವಾ ಗೆದ್ದಿದ್ದಾರೆ.

ಕಳೆದ ವರ್ಷದ ವಿಜೇತ ಪೋಲೆಂಡ್‌ನ ಮಿಸ್ ವರ್ಲ್ಡ್ 2022 ಕರೋಲಿನಾ ಬಿಲಾವ್ಸ್ಕಾ ತಮ್ಮ ಉತ್ತರಾಧಿಕಾರಿಗೆ ಈ ಕಿರೀಟವನ್ನು ಧರಿಸಿದರು.ಲೆಬನಾನ್‌ನ ಯಾಸ್ಮಿನಾ ಜೈಟೌನ್ ಸ್ಪರ್ಧೆಯ ಮೊದಲ ರನ್ನರ್‌ಅಪ್‌ ಎನಿಸಿಕೊಂಡರು.

71ನೇ ಆವೃತ್ತಿಯ ಮಿಸ್‌ ವರ್ಲ್ಡ್‌ ಫೈನಲ್‌ ಭಾರತದಲ್ಲಿ ಅದ್ದೂರಿಯಾಗಿ ನೆರವೇರಿದ್ದು, ವಿಶ್ವದ ಪ್ರಮುಖ ದೇಶಗಳ ಮಹಿಳೆಯರ ಸೌಂದರ್ಯ ಮತ್ತು ಸಾಮರ್ಥ್ಯವನ್ನು ಜಗತ್ತಿಗೆ ಅನಾವರಣಗೊಳಿಸಿದೆ. ಜಗತ್ತಿಗೆ ಹಲವು ವಿಭಾಗದ ಬ್ಯೂಟಿ ಕ್ವೀನ್‌ಗಳನ್ನು ನೀಡಿದ ದೇಶವಾಗಿರುವ ಕಾರಣಕ್ಕಾಗಿ ಭಾರತದಲ್ಲಿ ನಡೆದ 71ನೇ ಆವೃತ್ತಿಯ ವಿಶ್ವಸುಂದರಿ ಸ್ಪರ್ಧೆ ಸಾಕಷ್ಟು ಉತ್ಸಾಹ ಹಾಗೂ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

ಕೇವಲ ಬ್ಯೂಟಿ ಪೇಜೆಂಟ್‌ ಮಾತ್ರವೇ ಆಗಿರದೆ, ಹೆಣ್ತನ ಹಾಗೂ ವಿವಿಧ ದೇಶಗಳ ಹೆಣ್ಣು ಮಕ್ಕಳ ವೈವಿಧ್ಯತೆಯ ಆಚರಣೆ ಎನಿಸಿಕೊಂಡಿತ್ತು. ಭಾರತೀಯ ವಿನ್ಯಾಸಕಿ ಅರ್ಚನಾ ಕೊಚ್ಚರ್ ಅವರು ವಿಶೇಷ ರೇಷ್ಮೆ ಬಟ್ಟೆಯನ್ನು ಬಳಸಿ ವಿಶ್ವ ಸುಂದರಿ 2024 ಸ್ಪರ್ಧಿಗಳಿಗಾಗಿ ಎಲ್ಲಾ ಬಟ್ಟೆಗಳನ್ನು ವಿನ್ಯಾಸಗೊಳಿಸಿದ್ದು ವಿಶೇಷವಾಗಿತ್ತು.
71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಬಾಲಿವುಡ್ ನಟರಾದ ಕೃತಿ ಸನೋನ್ ಮತ್ತು ಪೂಜಾ ಹೆಗ್ಡೆ ಅವರು 12 ಸದಸ್ಯರ ತೀರ್ಪುಗಾರರ ಸಮಿತಿಯಲ್ಲಿ ಸೇರಿದ್ದರು. ಮಿಸ್ ವರ್ಲ್ಡ್ ಆರ್ಗನೈಸೇಶನ್ ಸಿಇಒ,  ಜೂಲಿಯಾ ಎವೆಲಿನ್ ಮೋರ್ಲಿ, ಅಮೃತಾ ಫಡ್ನವಿಸ್, ಸಾಜಿದ್ ನಾಡಿಯಾಡ್ವಾಲಾ, ಮಾಜಿ ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್, ಇಂಡಿಯಾ ಟಿವಿ ಅಧ್ಯಕ್ಷ ಮತ್ತು ಸಂಪಾದಕ-ಮುಖ್ಯಸ್ಥ ರಜತ್ ಶರ್ಮಾ, ಜಮಿಲ್ ಸೈದ್ ಮತ್ತು ವಿನೀತ್ ಜೈನ್ ಇತರ ತೀರ್ಪುಗಾರರಾಗಿದ್ದರು. ವಿಶ್ವ ಸುಂದರಿ 2017 ರ ಮಾನುಷಿ ಛಿಲ್ಲರ್ ಸೇರಿದಂತೆ ಮಾಜಿ ವಿಶ್ವ ಸುಂದರಿ ಸ್ಪರ್ಧಿಗಳು ಸಹ ಸಮಿತಿಯಲ್ಲಿದ್ದರು.

 

RELATED ARTICLES

Related Articles

TRENDING ARTICLES