ಬೆಂಗಳೂರು: ಇತ್ತೀಚಗಷ್ಟೇ ರಾಕಿಂಗ್ ಸ್ಟಾರ್ ಯಶ್ ಬೀದಿ ಬದಿಯ ಕಿರಾಣಿ ಅಂಗಡಿಯೊಂದರಲ್ಲಿ ಮಕ್ಕಳಿಗೆ ತಿಂಡಿ ಕೊಡಿಸಿದ ಫೋಟೋ ಒಂದು ವೈರಲ್ ಆಗಿತ್ತು.ಇದರ ಬೆನ್ನಲ್ಲೇ ಇದೀಗ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು,ರಾಧಿಕಾ ಪಂಡಿತ್ ಆಗಾಗ ತಮ್ಮ ಫ್ಯಾಮಿಲಿ ಜತೆ ಸಮಯ ಕಳೆದಿರುವ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಕುಟುಂಬ ಕರುವಿನ ಜೊತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಫೋಟೋದಲ್ಲಿ ಐರಾ ಯಶ್ ಮುದ್ದಾಗಿ ಕರುವಿಗೆ ಹಾಲು ಕುಡಿಸುತ್ತಿರುವುದು ಕಂಡುಬಂದಿದೆ. ಯಶ್ ಮಕ್ಕಳು ಕರುವನ್ನು ಮುದ್ದಿಸಿ ಖುಷಿಪಟ್ಟಿದ್ದಾರೆ.
ರಾಧಿಕಾ ಪಂಡಿತ್ ಅವರ ತಂದೆ, ತಾಯಿ, ಮೊಮ್ಮಗಳು ಐರಾ ಸೇರಿ ಕರುವಿವನ್ನು ಮುದ್ದು ಮಾಡಿದ್ದಾರೆ.
ಐರಾ ಪಿಂಕ್ ಬಣ್ಣದ ಫ್ರಾಕ್ ಧರಿಸಿ ಕ್ಯೂಟ್ ಆಗಿ ಕಾಣಿಸಿದರೆ ಯಥರ್ವ್ ಬ್ಲೂ ಶಾರ್ಟ್ಸ್ ಶರ್ಟ್ ಧರಿಸಿ ಕ್ಯೂಟ್ ಅಗಿ ಕಾಣಿಸಿದ್ದಾರೆ.
ರಾಧಿಕಾ ಪಂಡಿತ್ ಅವರು ಆಗಾಗ ಮಕ್ಕಳ ಜೊತೆಗಿನ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. ಮಕ್ಕಳ ಆ್ಯಕ್ಟಿವಿಟಿಸ್, ಔಟಿಂಗ್, ಆಟ, ಬರ್ತ್ಡೇ, ಗೇಮ್ಸ್ ಎಲ್ಲವನ್ನೂ ನಟಿ ಇನ್ಸ್ಟಾಗ್ರಾಮ್ನಲ್ಲಿ ಫ್ಯಾನ್ಸ್ ಜೊತೆ ಶೇರ್ ಮಾಡುತ್ತಾರೆ.
ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.