ಬೆಂಗಳೂರು : ದುಷ್ಟ ರಾಜಕಾರಣ ಮಾಡಿರೋದು ಸಿಎಂ ಸಿದ್ದರಾಮಯ್ಯ ಅವರು ಎಂದು ವಿಧಾನಪರಿಷತ್ ವಿಪಕ್ಷ ಸಚೇತಕ ಎನ್. ರವಿಕುಮಾರ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಗೆ ಮೊದಲೇ ಮತ ಹಾಕಿಸಿಕೊಳ್ಳುವ ವಿಚಾರ ಗೊತ್ತಿತ್ತು. ಅನುಕೂಲ ಸಿಂಧು ರಾಜಕಾರಣ ಮಾಡಿದ್ದಾರೆ ಎಂದು ಕುಟುಕಿದರು.
ಆತ್ಮಸಾಕ್ಷಿಯ ರಾಜಕಾರಣ ಮಾಡಿಲ್ಲ. ಬಿಜೆಪಿ ಎಂದೂ ಅವರ ವಿರುದ್ಧವಾಗಿ ನಡೆದುಕೊಂಡಿಲ್ಲ. ಅವರು ಪಕ್ಷಕ್ಕೆ ದ್ರೋಹ ಬರೆದಿದ್ದಾರೆ. ನಾವು ಶಿವರಾಮ್ ಹೆಬ್ಬಾರ್ ಅವರನ್ನು ಸಂಪರ್ಕ ಮಾಡುವ ಕೆಲಸ ಮಾಡ್ತಿದ್ದೇವೆ. ಸ್ವಿಚ್ ಆಫ್ ಬರ್ತಿದೆ. ಈಗಲೂ ಟಿವಿ ನೋಡ್ತಿದ್ರೆ, ಬಂತು ಮತ ಚಲಾಯಿಸಿ ಎಂದು ಶಿವರಾಮ್ ಹೆಬ್ಬಾರ್‌ಗೆ ಸೂಚಿಸಿದರು.
ಕಾಂಗ್ರೆಸ್ ದುಷ್ಟ ರಾಜಕಾರಣ ಮಾಡಿದೆ
ಇಂದು ಕಾಂಗ್ರೆಸ್ ಪಕ್ಷ ನಮ್ಮ ಬಿಜೆಪಿಯ ಇಬ್ಬರು ಎಂಎಲ್‌ಎಗಳ ಮತ ಪಡೆಯಲು ದುಷ್ಟ ರಾಜಕಾರಣ ಮಾಡಿದೆ. ಒಬ್ಬರು ಆತ್ಮಸಾಕ್ಷಿಯ ಮತ ಮಾಡಿದ್ದೇನೆ ಅಂತ ಹೇಳಿದ್ದಾರೆ. ಕಾಂಗ್ರೆಸ್‌ಗೆ ಮತ ಹಾಕಿರೋ ಎಂಎಲ್‌ಎಗೆ ಹೇಳ್ತೀನಿ. ಇದು ಆತ್ಮ ದ್ರೋಹ. ಆಪರೇಷನ್ ಕಮಲ ಅಂತೆಲ್ಲಾ ಹೇಳ್ತಿದ್ದಾರೆ. ಆದ್ರೆ, ಅವರಾಗಿಯೇ ಬಂದು ಪಕ್ಷ ಸೇರಿದ್ರು. ಅಧಿಕಾರ ಅನುಭವಿಸಿದ್ರು. ಅಂತh ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆ ಎರಡೂ ಕ್ಷೇತ್ರ ನಾವು ಗೆಲ್ಲುತ್ತೇವೆ
ಬರುವ ದಿನದಲ್ಲಿ ಬಿಜೆಪಿ ಧೃಡವಾಗಿ ನಿರ್ಧರಿಸುತ್ತೆ. ಆ ಎರಡೂ ಕ್ಷೇತ್ರ ನಾವು ಗೆಲ್ಲುತ್ತೇವೆ. ಹೆಬ್ಬಾರ್ ಅವರಿಗೆ ಈಗಲೂ ಮನವಿ ಮಾಡ್ತೀನಿ. ನಮ್ಮ ಮೈತ್ರಿ ಅಭ್ಯರ್ಥಿಗೆ ಮತ ಹಾಕುವಂತೆ. ಕಾಂಗ್ರೆಸ್ ದ್ರೋಹ ಬಗೆದಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ, ಕರ್ನಾಟಕದ ಪ್ರಭಾರಿಗಳು ಹೈಕಮಾಂಡ್ ಜೊತೆಗೆ ಚರ್ಚೆ ಮಾಡ್ತಾರೆ. ಯಾವ ರೀತಿ ಕ್ರಮ ಆಗಬೇಕು ಅಂತ ವಕೀಲರ ಜೊತೆ ಚರ್ಚೆ ಮಾಡಲಿದ್ದೇವೆ ಎಂದು ಎನ್. ರವಿಕುಮಾರ್ ಹೇಳಿದರು.